ಶಿರಸಿ: ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ
ಶಿರಸಿ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿ, ಗಾಂಜಾ ವಶಪಡಿಸಿಕೊಂಡ ಘಟನೆ ಯಲ್ಲಾಪುರ ನಾಕಾದಲ್ಲಿ ನಡೆದಿದೆ. ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಆರೋಪಿತರಾದ ಮುಸ್ಲಿಂ ಗಲ್ಲಿಯ ಇಜಾಜ ( ಎ.ಜೆ ) ಮಕ್ಬೂಲ್ ಅಹ್ಮದ್ ಷೇಖ್ (೨೭) ಹಾಗೂ ರಾಜೀವ ನಗರದ ಇಮ್ರಾನ್ ಅಬ್ದುಲ್ ರಜಾಕ್ ಬೆಣ್ಣಿ (೨೦) ಇವರನ್ನು ದಸ್ತಗಿರಿ ಮಾಡಿ, 14,300 ರೂ ಮೌಲ್ಯದ 286 ಗ್ರಾಂ ಗಾಂಜಾ ಮಾದಕ ವಸ್ತು, 4500 ರೂ ಮೌಲ್ಯದ ಸ್ಯಾಮಸಂಗ ಹಾಗೂ ರಿಯಲ್ ಮಿ ಕಂಪನಿಯ ಎರಡು ಮೊಬೈಲ್ ಹಾಗೂ ನಗದು ಹಣ 750 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.