ಶಿರಸಿ: ಮತ್ತೀಘಟ್ಟಾ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕ ಕಾಣೆ : ಭಾರಿ ಮಳೆಯಲ್ಲಿ ಯುವಕನಿಗಾಗಿ ಹುಡುಕಾಟ
ಶಿರಸಿ: ಪ್ರವಾಸಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಯುವಕನೋರ್ವ ಫಾಲ್ಸ್ ನಲ್ಲಿ ಕಾಲು ಜಾರಿ ನಾಪತ್ತೆಯಾಗಿರುವ ಘಟನೆ ಮತ್ತಿಘಟ್ಟಾ ಜಲಪಾತದಲ್ಲಿ ಭಾನುವಾರ ನಡೆದಿದೆ. ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನೆಹಕ್ಲಿನ ಪವನ ಕಾಣೆಯಾದ ಯುವಕ. ಈತ ಸ್ನೇಹಿತನೊಂದಿಗೆ ಮತ್ತಿಘಟ್ಟಾ ಫಾಲ್ಸ್ ನೋಡಲು ತೆರಳಿದ್ದ ವೇಳೆ ಮೋಜು ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯುವಕನ ಪತ್ತೆ ಕಾರ್ಯ ಮಾಡುತ್ತಿದ್ದು ತೀವ್ರ ಮಳೆ ಇರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.