ಶಿರಸಿ: ಶಿರಸಿಯ ರಕ್ಷಿತ್ ರವೀಂದ್ರಗೆ ರಾಜ್ಯ ಮಟ್ಟದ ಮುಕ್ತ ಅಥ್ಲೇಟಿಕ್ ಪಂದ್ಯಾಟದಲ್ಲಿ ಎರಡನೇ ಸ್ಥಾನ
ಶಿರಸಿ : ಉತ್ತರ ಕನ್ನಡ ಜಿಲ್ಲಾ ಅಥ್ಲೇಟಿಕ್ ಅಸೋಸಿಯೇಶನ್ ಸದಸ್ಯ ಶಿರಸಿಯ ರಕ್ಷಿತ್ ರವೀಂದ್ರಗೆ ರಾಜ್ಯ ಮಟ್ಟದ ಮುಕ್ತ (ಸೀನಿಯರ್) ಅಥ್ಲೇಟಿಕ್ ಪಂದ್ಯಾಟದಲ್ಲಿ ೪೦೦ ಮೀಟರ್ ಹರ್ಡಲ್ಸ ನಲ್ಲಿ ೫೨.೧೭ ಸೆಕೆಂಡ್‌ನಲ್ಲಿ ಓಡಿ ಎರಡನೇಯ ಸ್ಥಾನ ಪಡೆದು, ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂದಲ್ಲಿ ಭಾನುವಾರ ಜರುಗಿದ ರಾಜ್ಯ ಮಟ್ಟದ ಸೀನಿಯರ್ ಅಥ್ಲೇಟಿಕ್ ಪಂದ್ಯಾಟದಲ್ಲಿ ಈ ಸಾಧನೆ ಮಾಡಿದ್ದಾನೆ. ರಕ್ಷಿತ್ ಈಗ ಕೇಂದ್ರ ಸರಕರಾದ ಕ್ರೀಡಾ ಪ್ರಾಧಿಕಾರ ದಲ್ಲಿ ಒಲಂಪಿಯನ್ ಅಶ್ವಿನಿ ಅಕ್ಕುಂಜಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾನೆ ಎಂಬುದು ಉಲ್ಲೇಖನೀಯ.