ಶಿರಸಿ: ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಶಿರಸಿ : ಕೆಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಭಾನುವಾರ ಕೆಡಿಸಿಸಿ ಬ್ಯಾಂಕ ಲಿ.ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾರಾಯಣ ನಾಯಕ ಕಾರವಾರ, ಉಪಾಧ್ಯಕ್ಷರಾಗಿ ಶಿರಸಿಯ ಯೋಗೇಂದ್ರ ಪೂಜಾರಿ ಮತ್ತು ಹಳಿಯಾಳದ ಶಶಿಕಾಂತ ಬೆಳಗಾಂವಕರ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಚಿತ್ರಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಮಹಾಂತೇಶ ವಿಭೂತಿ, ಖಜಾಂಚಿಯಾಗಿ ಸತೀಶ ಶಿವಪ್ಪ ಕೊರಚರ ಇವರನ್ನು ನೌಕರರ ಒಕ್ಕೂಟದ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು.