ಶಿರಸಿ: ಐದು ರಸ್ತೆ ಬಳಿ ವಾಹನ ಅಫಘಾತ ಮಾಡಿ 33 ವರ್ಷ ನ್ಯಾಯಾಲಯಕ್ಕೆ ಬಾರದೇ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಶಿರಸಿ : ವಾಹನ ಅಪಘಾತ ಮಾಡಿ ವ್ಯಕ್ತಿ ಸಾವಿಗೀಡಾದ ಪ್ರಕರಣದಲ್ಲಿ 33 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ. 1992 ರಲ್ಲಿ ನಗರದ 5 ರಸ್ತೆ ಬಳಿ ಮಾರ್ಶಲ್ ಲೂಯಿಸ್ ಕ್ಯಾಸ್ತಲಿನ್ ಕಾರ್ಕಳ ಎಂಬಾತ ತನ್ನ ವಾಹನದಿಂದ ವಾಸು ಗೌಡಿ ಎಂಬ ಸೈಕಲ್ ಸವಾರನಿಗೆ ಅಪಘಾತ ಪಡಿಸಿ ಆತನ ಸಾವಿಗೆ ಕಾರಣವಾಗಿದ್ದನು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ 33 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.