ಶಿರಸಿ: ಕೋವೆಸರ ಕ್ರಾಸ್ ಬಳಿ ಬೈಕ್-ಕಾರಿನ ಮಧ್ಯೆ ಅಪಘಾತ, ಓರ್ವ ಸಾವು
ಶಿರಸಿ: ಶಿರಸಿ-ಕುಮಟಾ ರಸ್ತೆಯ ಕೋವೆಸರ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟರೆ, ಇನ್ನೋರ್ವ ಗಂಭೀರ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸೇರಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿರಗೋಡನ ಜಾಫರ್ ಮೌಲಾಲಿ ಜಾನಗುಂಡಿ (೩೦) ಮೃತಪಟ್ಟಿದ್ದು, ಹಿಂಬದಿ ಸವಾದ ಇಮ್ತಿಯಾಜ್ ಮಹ್ಮ ಸತ್ತಾ (೪೦) ಚಿಂತಾಜನಕ ಸ್ಥಿತಿಯಲ್ಲಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ. ಇಬ್ಬರು ಸವಾರರು ಬೈಕ್ ನಲ್ಲಿ ಶಿರಸಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಅತಿವೇಗದಿಂದ ಆಗಮಿಸಿದ ಕಾರು ಕೋವೆಸರ ಬಳಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಒಬ್ಬ ಸವಾರ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾರೆ.