
ಯಾದಗೀರ್ ನ್ಯೂಸ್ ವರದಿಗೆ ಸ್ಪಂದನೆ; ಸಿಸಿ ರಸ್ತೆ ಪಕ್ಕದಲ್ಲಿ ಮೊರಂ ಹಾಕಿದ ಅಧಿಕಾರಿಗಳು!
ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ನ ಕೆಇಬಿ ಕಚೇರಿ ಪಕ್ಕದಲ್ಲಿ ಸಿಸಿ ರಸ್ತೆ ನಿರ್ಮಿಸಿದ ಬಳಿಕ ಪಕ್ಕದಲ್ಲಿ ಮೊರಂ ಹಾಕದೆ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರು; ಯಾದಗೀರ್ ನ್ಯೂಸ್ನಲ್ಲಿ ಸುದ್ದಿ ಪ್ರಸಾರವಾದ ಒಂದು ವಾರದಲ್ಲೇ ರಸ್ತೆ ಬದಿಗೆ ಮೊರಂ ಹಾಕುವ ಕಾರ್ಯ ಕೈಗೊಂಡಿದ್ದಾರೆ!
ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್ನ ಕೆಇಬಿ ಕಚೇರಿ ಪಕ್ಕದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ರಸ್ತೆ ನಿರ್ಮಾಣದ ಬಳಿಕ ಪಕ್ಕದಲ್ಲಿ ಮೊರಂ ಹಾಕದೆ ಹಾಗೆಯೇ ಬಿಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಕಾಮಗಾರಿ ನಿರ್ವಹಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಯಾದಗೀರ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು.
ಯಾದಗೀರ್ ನ್ಯೂಸ್ನಲ್ಲಿ ಸುದ್ದಿ ಪ್ರಸಾರವಾದ ಕೇವಲ ಒಂದು ವಾರದೊಳಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿದ್ದು, ಸಿಸಿ ರಸ್ತೆಯ ಪಕ್ಕದಲ್ಲಿ ಮೊರಂ ಹಾಕುವ ಕಾರ್ಯ ಕೈಗೊಂಡಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಬೆಳಕಿಗೆ ತರುವ ಮಾಧ್ಯಮದ ವರದಿಗೆ ಸ್ಪಂದಿಸಿ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾದಗೀರ್ ನ್ಯೂಸ್ನ ಸಾಮಾಜಿಕ ಕಳಕಳಿಯ ವರದಿಗಾರಿಕೆ ಮುಂದುವರಿಯಲಿದೆ.
#YadgirNews #Yadgir #YadgirDistrict #YadgirCity #HossalliCross #KEBOffice #CCRoad #RoadDevelopment #MorumWork #PublicIssue #PublicVoice #MediaImpact #NewsImpact #KannadaNews #KarnatakaNews #BreakingNews #YadgirNewsBreaking #GroundReport #CivicIssues #DevelopmentWorks #YadgirUpdates #FastFairFearless
Yadgir, Yadgir | Nov 16, 2026