ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬಾಲಕಾರ್ಮಿಕತೆ, ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಅಭಿಯಾನ
ಯಾದಗಿರಿ: ಬಾಲಕಾರ್ಮಿಕತೆ, ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಬಾಲ್ಯವಿವಾಹ ಮುಕ್ತ ಯಾದಗಿರಿ ನಿರ್ಮಾಣದ ಉದ್ದೇಶದಿಂದ ಹಮ್ಮಿಕೊಂಡಿರುವ 100 ದಿನಗಳ ಅಭಿಯಾನದ ಅಂಗವಾಗಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಾರ್ಗದರ್ಶಿ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮರಿಯಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರು, ಸಂಚಾರಿಗಳು ಹಾಗೂ ಕಾರ್ಮಿಕರಿಗೆ ಬಾಲಕಾರ್ಮಿಕತೆ, ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ರೈಲ್ವೆ ಸಹಾಯವಾಣಿ, ಚೈಲ್ಡ್ಲೈನ್ ಸೇವೆಗಳು ಹಾಗೂ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ಮಕ್ಕಳ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರದ ಕುರಿತು ತಿಳಿಸಲಾಯಿತು. ರೈಲ್ವೆ ನಿಲ್ದಾಣದ ವಿವಿಧ ಸ್ಥಳಗಳಲ್ಲಿ ಜಾಗೃತಿ ಪೋಸ್ಟರ್ಗಳನ್ನು ಅಂಟಿಸುವುದರ ಜೊತೆಗೆ ಪ್ರಯಾಣಿಕರಿಗೆ ಕರಪತ್ರಗಳನ್ನು ವಿತರಿಸಲಾಯಿತು.
ಯಾದಗಿರಿ ರೈಲ್ವೆ ನಿಲ್ದಾಣದಿಂದ ವಾಡಿ ರೈಲ್ವೆ ನಿಲ್ದಾಣದವರೆಗೆ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಪಿಎಫ್ ಯಾದಗಿರಿಯ ಎಎಸ್ಐಗಳಾದ ರಾಚಪ್ಪ ನಾಯಕ, ಬುಕ್ಕ ರವಿ, ರೈಲ್ವೆ ಎಸ್ಎಂಆರ್ ಭಗೀರಥ ಮೀನಾ, ಡಿವೈಎಸ್ಎಸ್ನ ಕೆ. ಸವಿತಾ, ರೈಲ್ವೆ ಕಾನ್ಸ್ಟೇಬಲ್ ಗಣೇಶ್, ಹೆಡ್ ಕಾನ್ಸ್ಟೇಬಲ್ ದೇವೀಂದ್ರ, ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ನಿರೀಕ್ಷಕರಾದ ರಿಯಾಜ್ ಪಟೇಲ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಾಜೇಶ್ವರಿ, ಮಕ್ಕಳ ಸಹಾಯವಾಣಿ (1098) ಸಿಬ್ಬಂದಿ ಸಾಬಯ್ಯ, ಮಾರ್ಗದರ್ಶಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಕೀರ್ತನಾ ಪಂಚಾಳ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳಾದ ಚೆನ್ನಮ್ಮ, ರಾಜೇಶ್ವರಿ, ವಿಜಯಕುಮಾರ ಹಾಗೂ ಈಶಪ್ಪ ಭಾಗವಹಿಸಿದ್ದರು.
#YadgirNews #Yadgir #ChildLabourFreeIndia #StopChildLabour #StopChildTrafficking #WomenSafety #ChildProtection #StopChildMarriage #ChildMarriageFreeIndia #Childline1098 #RailwayAwareness #LegalAwareness #GuidarshiOrganization #DistrictLegalServicesAuthority #KarnatakaNews #YadgirDistrict #SocialAwareness #SaveChildren
Yadgir, Yadgir | Nov 24, 2026