
‘ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ವಿವಾದಕ್ಕೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ನಟ ಶ್ರೀರಾಮ್!
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ; ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರನ್ನೂ ಗೌರವಿಸುತ್ತೇನೆ ಎಂದ ‘ಪ್ರೇಮದ ಊರಲಿ’ ಚಿತ್ರದ ನಾಯಕ!
ಬೆಂಗಳೂರು: ‘ಪ್ರೇಮದ ಊರಲಿ’ ಸಿನಿಮಾ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಸಂಭ್ರಮಾಚರಣೆ ನಡೆಸಿದೆ. ಈ ವೇಳೆ ನಾಯಕ ನಟ ಶ್ರೀರಾಮ್, ಕನ್ನಡ ನಟರ ಕುರಿತು ತಾವು ನೀಡಿದ್ದ ಹೇಳಿಕೆಗಳಿಂದ ಉಂಟಾಗಿರುವ ವಿವಾದಕ್ಕೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
‘ನಾನು ಕನ್ನಡ ನಟರ ಬಗ್ಗೆ ಯಾವುದೇ ತಪ್ಪು ಮಾತನಾಡಿಲ್ಲ. ಇದನ್ನು ವಿವಾದ ಎಂದು ಕರೆಯುವುದೇ ತಪ್ಪು. ಆ ಸಂದರ್ಭದಲ್ಲಿ ನನ್ನ ಬಗ್ಗೆ ಮತ್ತು ನನ್ನ ಸಿನಿಮಾ ‘ಪ್ರೇಮದ ಊರಲಿ’ ಕುರಿತು ಮಾತ್ರ ಮಾತನಾಡಿದ್ದೆ’ ಎಂದು ಶ್ರೀರಾಮ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ತಮ್ಮ ಸಿನಿಮಾಗೆ ಬೆಂಬಲ ನೀಡಿದ್ದಾರೆ ಎಂದು ಸ್ಮರಿಸಿದ ಅವರು, ಜಗ್ಗೇಶ್, ಯಶ್, ರಿಷಬ್ ಶೆಟ್ಟಿ, ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಸೇರಿದಂತೆ ಎಲ್ಲ ನಟರ ಬಗ್ಗೆಯೂ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
‘ನಾನು ನಮ್ಮ ಮನೆಯವರ ಬಗ್ಗೆ ಯಾವತ್ತೂ ತಪ್ಪಾಗಿ ಮಾತನಾಡಲು ಸಾಧ್ಯವೇ ಇಲ್ಲ. ಅವರಿಂದ ಕಲಿತು, ಅವರ ಹೆಜ್ಜೆಗಳನ್ನು ಅನುಸರಿಸಿ ಬೆಳೆಯುತ್ತಿರುವ ಹುಡುಗ ನಾನು’ ಎಂದು ಹೇಳುವ ಮೂಲಕ ನಟ ಶ್ರೀರಾಮ್ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
#Sriram #PremadaOorali #PremadaOoraliMovie #KannadaCinema #Sandalwood #KannadaFilmIndustry #KannadaActors #Yash #Darshan #RishabShetty #Shivarajkumar #DhruvaSarja #Jaggesh #50DaysCelebration #MovieSuccess #SandalwoodNews #KannadaMovieNews #CinemaNews #FilmControversy #YadgirNews #YadgirNewsKannada #BreakingNews #KannadaNews
Yadgir, Yadgir | Nov 16, 2026