
ಬಾಳೆಹಳ್ಳಿ ಗ್ರಾಮದಲ್ಲಿ ದಾರಿ ತಪ್ಪಿದ್ದ 70 ವರ್ಷದ ವೃದ್ಧೆ; ಅಕ್ಕ ಪಡೆ ಪೊಲೀಸರಿಂದ ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರ!
ಬಾಳೆಹಳ್ಳಿ: ಸುಮಾರು 70 ವರ್ಷ ವಯಸ್ಸಿನ ವಿಳಾಸ ತಿಳಿಯದ ಮಹಿಳೆಯೊಬ್ಬರು ದಾರಿ ತಪ್ಪಿ ಬಾಳೆಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಅಕ್ಕ ಪಡೆ ಪೊಲೀಸರ ಸಮಯೋಚಿತ ಸ್ಪಂದನೆಯಿಂದ ಸುರಕ್ಷಿತವಾಗಿ ಕುಟುಂಬದವರನ್ನು ಸೇರಿದ್ದಾರೆ.
ಸಾರ್ವಜನಿಕರೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ, ಬಾಳೆಹಳ್ಳಿ ಗ್ರಾಮದಲ್ಲಿ ಅಪರಿಚಿತ ವೃದ್ಧೆಯೊಬ್ಬರು ಪತ್ತೆಯಾಗಿದ್ದು, ತಮ್ಮ ವಿಳಾಸದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮಹಿಳೆಯರ ಸುರಕ್ಷತೆಗಾಗಿ ಅಕ್ಕ ಪಡೆ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಕ್ಕ ಪಡೆ ತಂಡವು ವೃದ್ಧೆಯನ್ನು ಸುರಕ್ಷಿತವಾಗಿ ತಮ್ಮ ರಕ್ಷಣೆಗೆ ಪಡೆದು ಆತ್ಮೀಯವಾಗಿ ವಿಚಾರಣೆ ನಡೆಸಿದಾಗ, ಅವರು ಮಗಳ ಮನೆಗೆ ತೆರಳುವ ಸಂದರ್ಭದಲ್ಲಿ ದಾರಿ ತಪ್ಪಿ ಬಾಳೆಹಳ್ಳಿ ಗ್ರಾಮಕ್ಕೆ ಬಂದಿರುವುದು ತಿಳಿದುಬಂದಿದೆ.
ನಂತರ ವೃದ್ಧೆಯ ಮೊಮ್ಮಗನನ್ನು ಸಂಪರ್ಕಿಸಿದ ಪೊಲೀಸರು, ಯಾವುದೇ ತೊಂದರೆಯಾಗದಂತೆ ಹಿರಿಯ ಮಹಿಳೆಯನ್ನು ಸುರಕ್ಷಿತವಾಗಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಸಾರ್ವಜನಿಕರ ಸಮಯೋಚಿತ ಜಾಗೃತಿ ಹಾಗೂ ಪೊಲೀಸರ ತ್ವರಿತ ಮತ್ತು ಮಾನವೀಯ ಕಾರ್ಯಾಚರಣೆಯಿಂದ ಹಿರಿಯ ನಾಗರಿಕರೊಬ್ಬರು ಸುರಕ್ಷಿತವಾಗಿ ತಮ್ಮ ಕುಟುಂಬವನ್ನು ಸೇರಿರುವುದು ಶ್ಲಾಘನೀಯವಾಗಿದೆ.
#Akkapade #Dial112 #SeniorCitizenSafety #WomenSafety #KarnatakaPolice #PoliceService #Humanity #PublicAwareness #YadgirNews
Yadgir, Yadgir | Nov 17, 2026