ಮಡಿಕೇರಿ: ಕೊಡಗು: ವಾಷಿಂಗ್ ಮೆಷಿನ್ನಲ್ಲಿ ಪತ್ತೆಯಾಯ್ತು 10 ಅಡಿ ಉದ್ದದ ಕಾಳಿಂಗ ಸರ್ಪ
ಕೊಡಗಿನ ದೊಡ್ಡಪುಲಿಕೋಟು ಗ್ರಾಮದಲ್ಲಿ ಸಚಿನ್ ಅವರ ಮನೆಯ ವಾಷಿಂಗ್ ಮೆಷಿನ್ನಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಉರಗ ರಕ್ಷಕ ಯದುಕುಮಾರ್ ಅವರು ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ, ಅರಣ್ಯಕ್ಕೆ ಬಿಟ್ಟಿದ್ದಾರೆ.