ಶಿವಮೊಗ್ಗ: ಹಿಂದೂ ಸಮಾಜದ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಯಿಂದ ಇಡೀ ಪ್ರಪಂಚದ ಹಿಂದುಗಳಿಗೆ ನೋವಾಗಿದೆ ನಗರದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಹಿಂದೂ ಸಮಾಜ ಹಿಂಸ ಕೃತ್ಯಕ್ಕೆ ಇಳಿದಿದೆ ಎನ್ನುವ ರಾಹುಲ್ ಗಾಂಧಿ ಹೇಳಿಕೆಯಿಂದಾಗಿ ಇಡೀ ಪ್ರಪಂಚದ ಹಿಂದುಗಳಿಗೆ ನೋವಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.ಸೋಮವಾರ ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ನೇರವಾಗಿ ಹಿಂದೂ ಸಮಾಜ ಟೀಕೆ ಮಾಡುವ ಧೈರ್ಯ ಇದುವರೆಗೆ ಯಾರು ಮಾಡಿರಲಿಲ್ಲ.ಮುಸಲ್ಮಾನರ ಬೆಂಬಲದಿಂದ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು.ಅಂದುಕೊಂಡಿದ್ದರು ಈಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಈ ರೀತಿ ಮಾಡ್ತಾ ಇದ್ದಾರೆ ಅಲ್ಲದೆ ಬಿಜೆಪಿಗೆ ಪೂರ್ಣ ಬಹುಮತ ಬರದಿರುವುದು ರಾಹುಲ್ ಗಾಂಧಿಗೆ ಖುಷಿ ತಂದಿದೆ ಹಿಂದೂ ಸಮಾಜ ಹಿಂಸಾ ಕೃತ್ಯಕ್ಕೆ ಇಳಿದಿದೆ ಎನ್ನುವ ಹೇಳಿಕೆ ನೀಡುವ ಮೂಲಕ ಇಡಿ ಪ್ರಪಂಚದ ಹಿಂದುಗಳಿಗೆ ನೋವು ಮಾಡಿದ್ದಾರೆ ಎಂದರು.