ಶಿವಮೊಗ್ಗ: ಟಿಪ್ಪುನಗರದ ಚಾನೆಲ್ ಬಳಿ ಗಾಂಜಾ ಸೇವಿಸಿದ್ದ ಮೂವರು ಆರೋಪಿಗಳ ವಿರುದ್ಧ ದೂರ ದಾಖಲು
ಶಿವಮೊಗ್ಗದ ಟಿಪ್ಪು ನಗರದ ಚಾನೆಲ್ ಬಳಿ ಗಾಂಜಾ ಸೇವಿಸಿದ್ದ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಸಿಇಎನ್ ಠಾಣೆಯ ಪೊಲೀಸರು ಎಂದಿನಂತೆ ಗಸ್ತಿನಲ್ಲಿದ್ದ ವೇಳೆ ಟಿಪ್ಪು ನಗರದ ಚಾನೆಲ್ ಬಳಿ ಮೂವರು ಯುವಕರು ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಕೂಡಲೇ ಅವರನ್ನ ವಶಕ್ಕೆ ಪಡೆದ ಪೊಲೀಸರು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನಲೆ ಮೂವರು ಆರೋಪಿಗಳ ವಿರುದ್ಧ ನಗರದ ಸಿಇಎನ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.