ಶಿವಮೊಗ್ಗ: ಅಪಘಾತ ತಡೆಯಲು ರಿಪ್ಪನ್ ಪೇಟೆ ಪೊಲೀಸರಿಂದ ವಿನೂತನ ಜಾಗೃತಿ ಕಾರ್ಯ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಡೂರು ತಿರುಗು ಅಪಘಾತಗಳಿಗೆ ಹೆಸರುವಾಸಿ ಈ ಸ್ಥಳದಲ್ಲಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೇ ಇರುತ್ತದೆ. ಅದೆಷ್ಟು ಕುಟುಂಬಗಳು ಅನಾಥವಾಗಿದೆ ಪಿ ಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಸೋಮವಾರ ತುಡೂರಿನ ಅಪಘಾತ ವಲಯಗಳಲ್ಲಿ ನಾಮಫಲಕವನ್ನು ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ಪಾದಾಚಾರಿಕರಿಗೆ ರಸ್ತೆ ಸುರಕ್ಷಿತ ಅರಿವು ಮೂಡಿಸುವ ಕಾರ್ಯವನ್ನು ಮಾಡಿದರು.