ಶಿವಮೊಗ್ಗ: ವಿನೋಬನಗರದ ಮನೆಯೊಂದರಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ
ಶಿವಮೊಗ್ಗ ವಿನೋಬನಗರದ ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ದೂರು ದಾಖಲು. ಸಂದೀಪ್ ಎಂಬುವರ ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿದಂತಹ ಕಳ್ಳರು ಮನೆಯ ಬಿರುವಿನಲ್ಲಿದ್ದಂತಹ 1,02,000 ರೂಪಾಯಿ ಮೌಲ್ಯದ 34 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಕದ್ದುಪರಾರಿಯಾಗಿರುವ ಕುರಿತಾಗಿ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ