Install App
Login
HOME
Delhi
Haryana
Uttar Pradesh
Bihar
Chhattisgarh
Madhya Pradesh
Rajasthan
Jharkhand
Himachal Pradesh
Uttarakhand
Punjab
Andhra Pradesh
Telangana
Tamil Nadu
Karnataka
Maharashtra
Assam
West Bengal
Tripura
Gujarat
Odisha
Kerala
Jansamasya
News
Bjp
National
Bihar
कांग्रेस
Congress
Modi
Delhi
Viral
Up
Bollywood
दिल्ली
Breakingnews
Narendramodi
Madhya_pradesh
अयोध्या
उत्तरप्रदेश
Pmmodi
Rahulgandhi
Uttarpradesh
Haryana
Lucknow
Uttarakhand
लखनऊ
Crimenews
महंगाई
Sitapur
Aap
Asaduddinowaisi
mdrafiq790
Previous slide
Next slide
ಮೈ ತೋರಿಸೋದು ನನಗಿಷ್ಟವಿಲ್ಲ; ನನಗಾಗಿ ನಾನೇ ಲೈನ್ ಹಾಕಿಕೊಂಡಿದ್ದೇನೆ: ರಶ್ಮಿಕಾ!
Yadgir, Yadgir
| Nov 14, 2026
MORE NEWS
I got over 40,000 reactions on my posts last week! Thanks everyone for your support! 🎉
Yadgir, Yadgir | Nov 15, 2026
ಯಾದಗಿರಿ : ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಬಸ್ ನಿಲ್ದಾಣ ಆಟಕ್ಕುಂಟು ಲೆಕ್ಕಕ್ಕಿಲ್ಲ
Yadgir, Yadgir | Nov 15, 2026
ರಾಜ್ಯಪಾಲರಿಗೆ ತುಮಕೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ, ಗೌರವಪೂರ್ವಕ ಬೀಳ್ಕೊಡುಗೆ ತುಮಕೂರು, ನವೆಂಬರ್ 15: ಕರ್ನಾಟಕ ರಾಜ್ಯಪಾಲರ ತುಮಕೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಪ್ರವಾಸದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಎನ್. ನಂದಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ರಾಜ್ಯಪಾಲರನ್ನು ಸ್ವಾಗತಿಸಿ ಶಿಷ್ಟಾಚಾರ ಪಾಲಿಸಿದರು. ನಂತರ ತುಮಕೂರು ಜಿಲ್ಲೆಯ ಗಡಿಭಾಗವಾದ ಶಿರಾ ತಾಲ್ಲೂಕಿನ ಉಜ್ಜನಕುಂಟೆ ಗ್ರಾಮದವರೆಗೆ ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ರಾಜ್ಯಪಾಲರ ಪ್ರವಾಸದ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಶಿಷ್ಟಾಚಾರದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. #Tumakuru #TumakuruNews #KarnatakaGovernor #GovernorOfKarnataka #ShubhaKalyan #TumakuruDistrict #DistrictAdministration #KarnatakaNews #KarnatakaUpdates #NandiHalli #Sira #Ujjankunte #YadgirNews
Yadgir, Yadgir | Nov 15, 2026
ಯಾದಗಿರಿ ನಗರದ ಜಿಲ್ಲಾ ಆಸ್ಪತ್ರೆಯ ಪರಿಸ್ಥಿತಿ ನೋಡಿ ಹೇಗಿದೆ
Yadgir, Yadgir | Nov 14, 2026
Yadgir, Yadgir | Nov 14, 2026
ಕೆ ಆರ್ ಎಸ್ ಪಕ್ಷದಿಂದ ಇಂದು ರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ
Yadgir, Yadgir | Nov 13, 2026
ಪೂಜೆಯ ಹೆಸರಿನಲ್ಲಿ ಕರೆಯಿಸಿ ಲೈಂಗಿಕ ಶೋಷಣೆ; ನಾಲ್ವರು ಯುವತಿಯರನ್ನು ರಕ್ಷಿಸಿದ ಪೊಲೀಸರು!. ನಾಳೆ ಬೆಳಗ್ಗೆ 8: 40 ನಿಮಿಷಕ್ಕೆ ನಿಮ್ಮ ಯಾದ್ಗೀರ್ ನ್ಯೂಸ್ನಲ್ಲಿ #YadgirNews #BallariNews #KarnatakaNews #BreakingNews #CrimeNews #HumanTrafficking #ProstitutionRacket #PoliceOperation #AkkaSquad #WomenSafety #WomenPolice #RescueOperation #11Arrested #LakshmiPooja #FraudAlert #SexualExploitation #InterstateRacket #MysuruNews #ChikkamagaluruNews #AnantapurNews #KarnatakaPolice #CrimeAlert #IndiaNews #KannadaNews
Yadgir, Yadgir | Nov 13, 2026
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ. ▪️ಅಮೃತ ಭಾರತ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ‘ಚಾಮರಾಜನಗರ ಅಮೃತ ನಿಲ್ದಾಣ’ವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ▪️ಕರ್ನಾಟಕದಲ್ಲಿ ರೈಲ್ವೆ ಸಂಪರ್ಕ ವ್ಯವಸ್ಥೆ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಮಹತ್ವದ ಉಪಕ್ರಮವಾಗಿ ಬೆಂಗಳೂರಿನ ಐಐಎಂ ಸಭಾಂಗಣದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಪ್ರಧಾನಮಂತ್ರಿಗಳು ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಜೊತೆಗೆ ವಿವಿಧ ರೈಲ್ವೆ ಯೋಜನೆಗಳನ್ನು ರಿಮೋಟ್ ಬಟನ್ ಒತ್ತುವ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ▪️ಈ ಪೈಕಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಾದ ಚಾಮರಾಜನಗರ, ಸಕಲೇಶಪುರ, ಚಿಕ್ಕಮಗಳೂರು ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಗಳು ಸೇರಿವೆ. ▪️ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಈ ಯೋಜನೆಗಳಿಮದ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು, ರೈಲು ಕಾರ್ಯಾಚರಣೆಯ ದಕ್ಷತೆ ಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ. ಸುರಕ್ಷಿತ, ದಕ್ಷ, ಆಧುನಿಕ ಹಾಗೂ ಪ್ರಯಾಣಿಕ ಸ್ನೇಹಿ ರೈಲ್ವೆ ಸೇವೆಗಳನ್ನು ಒದಗಿಸುವ ಭಾರತೀಯ ರೈಲ್ವೆಯ ನಿರಂತರ ಬದ್ಧತೆಯನ್ನು ಈ ಕಾರ್ಯಕ್ರಮಗಳು ಪ್ರತಿಬಿಂಬಿಸಲಿವೆ. ▪️ನಗರದ ರೈಲು ನಿಲ್ದಾಣದಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ದೀಪ ಬೆಳಗಿಸಿ, ಪುನರಾಭಿವೃದ್ಧಿಗೊಂಡ ‘ಚಾಮರಾಜನಗರ ಅಮೃತ ನಿಲ್ದಾಣ’ ದ ನಾಮಫಲಕ ಅನಾವರಣಗೊಳಿಸಿದರು. ▪️ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ‘ಚಾಮರಾಜನಗರ ಅಮೃತ ನಿಲ್ದಾಣ’ ಉದ್ಘಾಟನೆಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನವಾಗಲಿದೆ. ಜಿಲ್ಲೆಯ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳನ್ನು ಜನರು ವೀಕ್ಷಿಸಲು ಜಿಲ್ಲೆಗೆ ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಅಗತ್ಯವಾಗಿದೆ. ಸ್ಥಳೀಯವಾಗಿಯೂ ಉದ್ಯೋಗ ಸೃಷ್ಠಿಯಾಗಲಿದೆ. ಜಿಲ್ಲಾಡಳಿತವು ರೈಲ್ವೆ ಇಲಾಖೆಗೆ ಅಗತ್ಯ ಸಹಕಾರ ನೀಡಲಿದೆ ಎಂದರು. ▪️ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾದ ಶಿರೀಶ್ ಸದಾಶಿವ ಕಾಂಭ್ಳೆ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಯ ಪಯಣದಲ್ಲಿ ಅಮೃತ ನಿಲ್ದಾಣ ಯೋಜನೆಯು ಐತಿಹಾಸಿಕ ಮೈಲಿಗಲ್ಲಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ ತಂಗುದಾಣ, ಫ್ಲಾಟ್ಫಾರಂ ವಿಸ್ತರಣೆ, ಉತ್ತಮ ವಿನ್ಯಾಸದ ಪ್ರವೇಶದ್ವಾರ, ಸಿಸಿ ಟಿವಿ ಅಳವಡಿಕೆ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಈ ರೈಲು ನಿಲ್ದಾಣದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದು ತಿಳಿಸಿದರು. ▪️ಆರಂಭದಲ್ಲಿ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ▪️ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ರೈಲ್ವೆ ಇಲಾಖೆಯ ಡಿಆರ್ಯುಸಿಸಿ ವಿ. ಪ್ರಭಾಕರ್ ಸೇರಿದಂತೆ ರೈಲ್ವೆ ಇಲಾಖೆಯ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Yadgir, Yadgir | Nov 13, 2026