ರಾಜ್ಯಪಾಲರಿಗೆ ತುಮಕೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ, ಗೌರವಪೂರ್ವಕ ಬೀಳ್ಕೊಡುಗೆ
ತುಮಕೂರು, ನವೆಂಬರ್ 15: ಕರ್ನಾಟಕ ರಾಜ್ಯಪಾಲರ ತುಮಕೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಪ್ರವಾಸದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಎನ್. ನಂದಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ರಾಜ್ಯಪಾಲರನ್ನು ಸ್ವಾಗತಿಸಿ ಶಿಷ್ಟಾಚಾರ ಪಾಲಿಸಿದರು.
ನಂತರ ತುಮಕೂರು ಜಿಲ್ಲೆಯ ಗಡಿಭಾಗವಾದ ಶಿರಾ ತಾಲ್ಲೂಕಿನ ಉಜ್ಜನಕುಂಟೆ ಗ್ರಾಮದವರೆಗೆ ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ರಾಜ್ಯಪಾಲರ ಪ್ರವಾಸದ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಶಿಷ್ಟಾಚಾರದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು.
#Tumakuru #TumakuruNews #KarnatakaGovernor #GovernorOfKarnataka #ShubhaKalyan #TumakuruDistrict #DistrictAdministration #KarnatakaNews #KarnatakaUpdates #NandiHalli #Sira #Ujjankunte #YadgirNews
Yadgir, Yadgir | Nov 15, 2026