ಅಥಣಿ: ಕಾಂಗ್ರೆಸ್ ನಿಗಮ ಮಂಡಳಿ ಪಟ್ಟಿಯಲ್ಲಿ RSS ಕಾರ್ಯಕರ್ತನಿಗೆ ಸ್ಥಾನ: ಅಥಣಿಯಲ್ಲಿ ಅಸಮಾಧಾನ
Athni, Belagavi | Nov 12, 2026 ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆರ್ಎಸ್ಎಸ್ ಕಾರ್ಯಕರ್ತ ಸುಶೀಲಕುಮಾರ್ ಪತ್ತಾರ್ ನೇಮಕ. ಅಥಣಿ ತಾಲೂಕಿನ ವಿಕ್ರಮಪುರದ ಸುಶೀಲಕುಮಾರ್ ನೇಮಕಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಪಸ್ವರ. ಲಕ್ಷ್ಮಣ ಸವದಿ ಆಪ್ತನಿಗೆ ಮಣೆ ಹಾಕಿದ್ದಕ್ಕೆ ಸ್ಥಳೀಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.