Install App
Login
HOME
Delhi
Haryana
Uttar Pradesh
Bihar
Chhattisgarh
Madhya Pradesh
Rajasthan
Jharkhand
Himachal Pradesh
Uttarakhand
Punjab
Andhra Pradesh
Telangana
Tamil Nadu
Karnataka
Maharashtra
Assam
West Bengal
Tripura
Gujarat
Odisha
Kerala
Jansamasya
News
Maharashtra
Bjp
National
Police
Bihar
कांग्रेस
हत्या
भारत
बीजेपी
Uttar_pradesh
Accident
Congress
Modi
Delhi
Viral
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
Pm
Uttarpradesh
Haryana
Cricket
Uttarakhand
dipryadgir
ಮಧ್ವಾಚಾರ್ಯರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ಪಂಡಿತ್ ನರಸಿಂಹಾಚಾರ್ ಪುರಾಣಿಕ
93 views |
Yadgir, Karnataka
| Oct 24, 2026
ಮಧ್ವಾಚಾರ್ಯರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ಪಂಡಿತ್ ನರಸಿಂಹಾಚಾರ್ ಪುರಾಣಿಕ
MORE NEWS
ಮತಗಟ್ಟೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ; ಪರಿಶೀಲನೆ
Yadgir, Karnataka | Oct 24, 2026
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಕೋ0ಡೆನ್ನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಎಂಬುವವರ ಹೊಲದ ಪಕ್ಕದಲ್ಲಿ ಅವರದೇ ಆದ ಅಂದಾಜು 30x30 ಅಡಿ ವಿಸ್ತಾರವಾದ 80 ಅಡಿ ಆಳದ ತೇರೆದ ನೀರಿಲ್ಲದ ಮೆಟ್ಟಿಲುಗಳೀಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ನಾಯಿಯು ಕಾಲು ಜಾರಿ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ದೂರವಾಣಿಗೆ ಕರೆ ಮಾಡಿ ತಿಳಿಸಿದರು. ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 80 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 03:00 ಮುವರು ಘಂಟೆಗಳ ಕಾಲ ಶ್ರಮವಹಿಸಿ ಅಧಿಕಾರಿ ಹಾಗು ಸಿಬ್ಬಂದಿಯವರುಗಳು ಬುಟ್ಟಿ ಹಾಗು ಚಿಲಗಳ ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ನಾಯಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ. ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಕೋ0ಡೆನಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿಗೆ ಯಶಸ್ವಿ ರಕ್ಷಣಾ ಕಾರ್ಯಚರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯರಾದ ಹಾಲಸಿದ್ದ ವಸಂತ ಮೇತ್ರಿ ನೇತ್ರತ್ವದಲ್ಲಿ ಪ್ರಮುಖ ಅಗ್ನಿಶಾಮಕರವರಾದ ರವೀಂದ್ರ ಸಂಗಮ, ಅಗ್ನಿಶಾಮಕ ಚಾಲಕರಾದ ಮಡಿವಾಳರ ಬಸವರಾಜ, ನಾಗಪ್ಪ ಶಿವಾಪುರ,ಹಾಗೂ ಅಗ್ನಿಶಾಮಕರಾದ ಮಲ್ಲಿಕಾರ್ಜುನ ಕಾಡಪ್ಪನವರ ದತ್ತಾತ್ರೇಯ,ಬೋರಗಾವಿ ಭಾಗವಹಿಸಿದ್ದರು.ಅಲ್ಲದೇ ಸಾರ್ವಜನಿಕರು ಸಹ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದರು.
Yadgir, Yadgir | Oct 23, 2026
ಯಾದಗಿರಿ : “ಯಾರಾದ್ರೂ ಸತ್ತರೆ ಹೆಣ ನಿಮ್ಮ ಮನೆ ಮುಂದೆ ಹಾಕುತ್ತೇನೆ” Chief Minister of Karnataka Yadgir News Jana Aakrosha DK Shivakumar Mdrafiq Patel H D Kumaraswamy Thippeswamy K T Karnataka State Police UT Khader Headlins One Gurumatkal Vlogs & News #shorts
Yadgir, Yadgir | Oct 23, 2026
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ 2026: ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ, ಶೇಕಡಾ 86.50 ರಷ್ಟು ಮತದಾನ ದಾಖಲು ಬಳ್ಳಾರಿ,ಅ.23 : ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ 2026ರ ಅಂಗವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸಂಜೆ 4 ಗಂಟೆಯ ವೇಳೆಗೆ ಒಟ್ಟು 86.50 ರಷ್ಟು ದಾಖಲೆಯ ಮತದಾನವಾಗಿದೆ. *ಮತದಾರರ ವಿವರ ಹಾಗೂ ಅಂತಿಮ ಅಂಕಿ-ಅAಶ:* ಒಟ್ಟು ನೋಂದಾಯಿತ ಮತದಾರರು: 3,393 (ಪುರುಷರು-1,814, ಮಹಿಳೆಯರು-1,579) ಚಲಾವಣೆಯಾದ ಒಟ್ಟು ಮತಗಳು: 2,935 ಮತ ಚಲಾಯಿಸಿದ ಪುರುಷರು: 1,615 (ಶೇ.89.08) ಮತ ಚಲಾಯಿಸಿದ ಮಹಿಳೆಯರು: 1,320 (ಶೇ.83.54) *ಹಂತ-ಹAತವಾಗಿ ಏರಿಕೆಯಾದ ಮತದಾನದ ಪ್ರಮಾಣ:* ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬAತು. ಬೆಳಿಗ್ಗೆ 10 ಗಂಟೆಗೆ- ಒಟ್ಟು 409 ಮತಗಳು (ಶೇ.12.05) ಚಲಾವಣೆಯಾಗಿದ್ದವು. ಮಧ್ಯಾಹ್ನ 12 ಗಂಟೆಗೆ- ಮತದಾನದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿ 1,453 ಮತಗಳು (ಶೇ.42.82) ದಾಖಲಾದವು. ಮಧ್ಯಾಹ್ನ 02 ಗಂಟೆಗೆ- ಮತದಾನ ಪ್ರಮಾಣ 2,333 ಮತಗಳೊಂದಿಗೆ ಶೇ.68.76 ಕ್ಕೆ ತಲುಪಿತು. ಸಂಜೆ 04 ಗಂಟೆಗೆ (ಅಂತಿಮ ಅವಧಿ)- ಒಟ್ಟು 2,935 ಮತಗಳು ಚಲಾವಣೆಯಾಗುವುದರೊಂದಿಗೆ ಮತದಾನವು ಶೇ.86.50 ತಲುಪಿ ಪೂರ್ಣಗೊಂಡಿತು. *ಮತಗಟ್ಟೆವಾರು ಮತದಾನದ ವಿವರ:* ನೂತನ ಜಿಲ್ಲಾಡಳಿತ ಭವನದ ಬಳ್ಳಾರಿ ತಾಲ್ಲೂಕು ಕಚೇರಿ(ಭಾಗ-1): ಒಟ್ಟು 939 ಮತದಾರರಲ್ಲಿ 791 ಮಂದಿ (393 ಪುರುಷರು, 398 ಮಹಿಳೆಯರು) ಮತದಾನ ಮಾಡಿದ್ದಾರೆ. ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೊಠಡಿ ಸಂ.1(ಭಾಗ-2): ಒಟ್ಟು 700 ಮತದಾರರಲ್ಲಿ 590 ಮತಗಳು (316 ಪುರುಷರು, 274 ಮಹಿಳೆಯರು) ಚಲಾವಣೆಯಾಗಿವೆ. ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೊಠಡಿ ಸಂ. 3 (ಭಾಗ-2ಎ): 564 ಮತದಾರರ ಪೈಕಿ 471 ಮಂದಿ (214 ಪುರುಷರು, 257 ಮಹಿಳೆಯರು) ಹಕ್ಕು ಚಲಾಯಿಸಿದ್ದಾರೆ. ಕಂಪ್ಲಿ ಪುರಸಭೆ ಕಚೇರಿ (ಭಾಗ-3): ಒಟ್ಟು 216 ಮತದಾರರಲ್ಲಿ 204 ಮತಗಳು (133 ಪುರುಷರು, 71 ಮಹಿಳೆಯರು) ದಾಖಲಾಗಿವೆ. ಕುರುಗೋಡು ತಾಲ್ಲೂಕು ಕಚೇರಿ (ಭಾಗ-4): ಒಟ್ಟು 120 ಮತದಾರರಲ್ಲಿ 110 ಮಂದಿ (85 ಪುರುಷರು, 25 ಮಹಿಳೆಯರು) ಮತ ಚಲಾಯಿಸಿದ್ದಾರೆ. ಸಂಡೂರು ತಾಲ್ಲೂಕು ಕಚೇರಿ (ಭಾಗ-5): ಒಟ್ಟು 387 ಮತದಾರರಲ್ಲಿ 344 ಮಂದಿ (186 ಪುರುಷರು, 158 ಮಹಿಳೆಯರು) ಮತದಾನ ಮಾಡಿದ್ದಾರೆ. ಸಿರುಗುಪ್ಪ ತಾಲ್ಲೂಕು ಕಚೇರಿ (ಭಾಗ-6): ಒಟ್ಟು 313 ಮತದಾರರ ಪೈಕಿ 281 ಮಂದಿ (167 ಪುರುಷರು, 114 ಮಹಿಳೆಯರು) ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಚೇರಿ (ಭಾಗ-7): ಒಟ್ಟು 96 ಮತದಾರರಲ್ಲಿ 87 ಮತಗಳು (66 ಪುರುಷರು, 21 ಮಹಿಳೆಯರು) ಚಲಾವಣೆಯಾಗಿವೆ. ಕರೂರು ನಾಡ ಕಚೇರಿ (ಭಾಗ-8): ಒಟ್ಟು 58 ಮತದಾರರಲ್ಲಿ 57 ಮತಗಳು (55 ಪುರುಷರು, 2 ಮಹಿಳೆಯರು) ಚಲಾವಣೆಯಾಗಿದ್ದು, ಇಲ್ಲಿ ಶೇಕಡಾ 98 ಕ್ಕೂ ಅಧಿಕ ಅತಿ ಹೆಚ್ಚು ಮತದಾನ ದಾಖಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಎಲ್ಲ ಒಂಬತ್ತು ಮತಗಟ್ಟೆಗಳಲ್ಲಿ ಶಿಕ್ಷಕ ಮತದಾರರು ಉತ್ಸಾಹದಿಂದ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ. -------- Yadgir News #shorts
Yadgir, Yadgir | Oct 23, 2026
Yadgir, Yadgir | Oct 23, 2026
#ಮೈಸೂರು #ದಸರಾ ಸಂಭ್ರಮದಲ್ಲಿ ಮಿಂಚಿದ ಕನ್ನಡ #ಸಿನಿತಾರೆಯರು @topfans Yadgir News #shorts
Yadgir, Yadgir | Oct 23, 2026
ವಿಜಯದಶಮಿಯಂದು ಕೋಲುಗಳ ಕಾಳಗ: ದೇವರಗಟ್ಟದಲ್ಲಿ ವಿಶಿಷ್ಟ ಸಂಪ್ರದಾಯ! ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದಲ್ಲಿ ನಡೆಯುವ ‘ಕರ್ರಲ ಸಮರಂ’ ವೀಕ್ಷಿಸಲು ಸಾವಿರಾರು ಭಕ್ತರ ಆಗಮನ ಆಂಧ್ರಪ್ರದೇಶ: ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟದಲ್ಲಿ ನಡೆಯುವ ವಿಶಿಷ್ಟ ಕೋಲುಗಳ ಕಾಳಗ ದೇಶದ ಗಮನ ಸೆಳೆಯುತ್ತದೆ. ಸ್ಥಳೀಯವಾಗಿ ‘ಕರ್ರಲ ಸಮರಂ’ ಎಂದು ಕರೆಯಲಾಗುವ ಈ ಆಚರಣೆಯು ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ದೇವರಗಟ್ಟದಲ್ಲಿ ವಿಜಯದಶಮಿಯಂದು ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನೆರವೇರಿದ ಬಳಿಕ ಕೋಲುಗಳ ಕಾಳಗ ಆರಂಭವಾಗುತ್ತದೆ. ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯುವ ಉದ್ದೇಶದಿಂದ ವಿವಿಧ ಗ್ರಾಮಗಳ ಭಕ್ತರು ಎರಡು ಗುಂಪುಗಳಾಗಿ ವಿಭಜನೆಗೊಂಡು ಪರಸ್ಪರ ಕೋಲುಗಳಿಂದ ಹೊಡೆದಾಡುತ್ತಾರೆ. ಈ ವಿಶಿಷ್ಟ ಆಚರಣೆಯೇ ‘ಕರ್ರಲ ಸಮರಂ’ ಎಂದೇ ಪ್ರಸಿದ್ಧಿ ಪಡೆದಿದೆ. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಕಾಳಗ ಈ ಸಾಂಪ್ರದಾಯಿಕ ಕಾಳಗವು ಸಾಮಾನ್ಯವಾಗಿ ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ನಡೆಯುತ್ತದೆ. ಕೋಲುಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವರಗಟ್ಟಕ್ಕೆ ಆಗಮಿಸುತ್ತಾರೆ. ವಿಜಯದಶಮಿಯ ಆಚರಣೆಯ ಭಾಗವಾಗಿ ನಡೆಯುವ ಈ ಉತ್ಸವ ಸ್ಥಳೀಯ ಜನರ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದೊಂದಿಗೆ ಬೆಸೆದುಕೊಂಡಿದೆ. ಆದರೆ, ಕೋಲುಗಳ ಹೊಡೆತದಿಂದ ಗಾಯಗಳಾಗುವ ಅಪಾಯವೂ ಇರುವುದರಿಂದ ಈ ಆಚರಣೆಯ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಮಹತ್ವದ್ದಾಗಿವೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ವಿಶಿಷ್ಟ ಆಚರಣೆ ಪ್ರತಿವರ್ಷ ವಿಜಯದಶಮಿಯಂದು ದೇವರಗಟ್ಟದಲ್ಲಿ ಸಾವಿರಾರು ಜನರನ್ನು ಆಕರ್ಷಿಸುತ್ತದೆ. #Devaragatta #KarraSamaram #BanniFestival #Kurnool #AndhraPradesh #Vijayadashami #DasaraFestival #KannadaNewsChannel @topfans #shorts
Yadgir, Yadgir | Oct 22, 2026
#shorts #ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: KSRTC ಬಸ್–ಲಾರಿ ಡಿಕ್ಕಿ, ಚಾಲಕ ಸೇರಿ ಇಬ್ಬರು ಸಾವು! 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ; ಓರ್ವನ ಸ್ಥಿತಿ ಗಂಭೀರ, ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರ ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗುರುವಾರ ಸಂಭವಿಸಿದ ಈ ಅಪಘಾತದಲ್ಲಿ ಬಸ್ ಚಾಲಕ ಬಾಪು ಪಾಟೀಲ್ (36) ಹಾಗೂ 14 ವರ್ಷದ ಪ್ರಯಾಣಿಕ ಗಗನ್ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ರಾಜು ನಾಯ್ಕ ಎಂಬ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಪಿಐ ಬಾಲಚಂದ್ರ ನಾಯ್ಕ್ ಅವರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. #Chitradurga #KSRTCBus #RoadAccident #BreakingNews #YadgirNews #Chitradurga #KSRTCBus #RoadAccident #BreakingNews #YadgirNews @topfans
Yadgir, Yadgir | Oct 22, 2026