ಶಿರಸಿ: ಲೊಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಾಲ್ಕು ನೂತನ ವಾಹನ ಹಸ್ತಾಂತರಿಸಿದ ಶಾಸಕ ಭೀಮಣ್ಣ ನಾಯ್ಕ
ಶಿರಸಿ : ರಾಜ್ಯ ಸರ್ಕಾರದಿಂದ ಶಿರಸಿ ವಿಭಾಗದ ಜಿಲ್ಲಾ ಪಂಚಾಯತ, ಲೊಕೊಪಯೋಗಿ ಇಲಾಖೆಗೆ ನೂತನವಾಗಿ ನೀಡಲಾಗಿರುವ ನಾಲ್ಕು ವಾಹನಗಳನ್ನು ಶಾಸಕ ಭೀಮಣ್ಣ ನಾಯ್ಕ ಇಲಾಖೆಗೆ ಹಸ್ತಾಂತರಿಸಿದರು. ಸೋಮವಾರ ಲೊಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಎದುರು ನಡೆದ ಸರಳ ಕಾರ್ಯಕ್ರಮದಲ್ಲಿ ವಾಹನಗಳಿಗೆ ಸ್ವತಃ ತಾವೇ ಪೂಜೆ ಮಾಡುವ ಮೂಲಕ, ಹಸಿರು ನಿಶಾನೆ ತೋರಿಸಿ ಶಾಸಕರು ವಾಹನಕ್ಕೆ ಚಾಲನೆ ನೀಡಿದರು.