ಶಿರಸಿ: ನಗರದ ಪಂಚವಟಿ ಸಭಾಂಗಣದಲ್ಲಿ ಪತ್ರಕರ್ತ ರಾಜು ಅಡಕಳ್ಳಿಯವರ 'ಸ್ಪೂರ್ತಿವಂತರು' ಕೃತಿ ಲೋಕಾರ್ಪಣೆ
ಶಿರಸಿ: ಮಾಧ್ಯಮ ಕ್ಷೇತ್ರದಲ್ಲಿ ಇಂದು ಕೈ ಹಿಡಿದು ಬರೆಸಬಲ್ಲ, ಮಾರ್ಗದರ್ಶನ ನೀಡುವ ಹಿರಿಯರ ಕೊರತೆ ಸಾಕಷ್ಟಿದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು. ನಗರದ ಪಂಚವಟಿ ಸಭಾಂಗಣದಲ್ಲಿ ಶನಿವಾರ ಮನು ವಿಕಾಸ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನ ಹಮ್ಮಿಕೊಂಡ ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರ 'ಸ್ಪೂರ್ತಿವಂತರು' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಿಂದೆಲ್ಲ ವಿಷಯ ಕೊಟ್ಟು ಬರೆಸುವ, ಬರೆದ ಲೇಖನಗಳಿಗೆ ಇನ್ನಷ್ಟು ಹೊಸ ದೃಷ್ಟಿ ಕೊಡುವ ಹಿರಿಯ ಪತ್ರಕರ್ತರು,ಮಾರ್ಗದರ್ಶಕರಿದ್ದರು. ಆದರೆ, ಇಂದು ಇಂಥ ಹಿರಿಯರನ್ನು ಹುಡುಕಬೇಕಿದೆ ಎಂದ ವಾನಳ್ಳಿ ಸ್ಥಳೀಯ ಭಾಷೆ, ನೆಲ ಮೂಲದ ಬರಹಗಳನ್ನು ಹೆಚ್ಚು ಹೆಚ್ಚು ಬರೆಯಬೇಕು ಎಂದರು