ಶಿರಸಿ: ವಿಜೃಂಭಣೆಯಿಂದ ಜರುಗಿದ ಮಾರುಕೇರಿಯ ಕೊಡುಕಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ವರ್ಧಂತಿ ಉತ್ಸವ
ಭಟ್ಕಳ: ತಾಲೂಕಿನ ಪುರಾತನ ದೇವಸ್ಥಾನ ಗಳಲ್ಲೊಂದಾದ ಮಾರುಕೇರಿಯ ಕೊಡುಕಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ವಿಜ್ರಂಭಣೆಯಿಂದ ಜರುಗಿತು. ವರ್ಧಂತಿ ಪ್ರಯುಕ್ತ ದೇವಸ್ಥಾನದಲ್ಲಿ ಶ್ರೀ ಗಣಪತಿ ಪೂಜೆ, ನಾಂದಿ,ಕಲಾವೃದ್ಧಿ ಹವನ, ಏಕಾದಶ ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ನೂರಾರು ಭಕ್ತರು ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ಧಾರ್ಮಿಕ ಕಾರ್ಯಕ್ರಮವನ್ನು ವೇ.ಮೂ. ಉದಯ ಅವಭೃತ ನೇತೃತ್ವದ ಪುರೋಹಿತರ ತಂಡ ನಡೆಸಿಕೊಟ್ಟಿತು. ಶಂಭುಲಿಂಗೇಶ್ವರ ದೇವರಿಗೆ ಪ್ರಮುಖರಿಂದ ಲೋಕಕಲ್ಯಾಣಾರ್ಥವಾಗಿ 25 ಸಾವಿರ ಬಿಲ್ವಾರ್ಚನೆ ನೆರವೇರಿತು.