ಶಿರಸಿ: ಕೋಟೆವಾಡ ಸ್ಮಶಾನದಲ್ಲಿ ಮರಗಳ ಮಾರಣ ಹೋಮ : ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಮೇಲೆ ಪ್ರಕರಣ
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆ ಅಧಿಕಾರಿಗಳಿಂದ ಮರಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್. ವಿರುದ್ಧ ಪ್ರಕರಣ ದಾಖಲಾಗಿದೆ. ಅಂಕೋಲಾ ತಾಲೂಕಿನ ಕೋಟೆವಾಡ ಹಿಂದೂ ಸ್ಮಶಾನ ಭೂಮಿಯಲ್ಲಿ ದೊಡ್ಡ ದೊಡ್ಡ ಆಲದ ಮರ, ಗಿಡಗಳನ್ನು ಬುಡ ಸಮೇತ ಕಟ್ ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿ ಮುಖ್ಯಾಧಿಕಾರಿ ವಿರುದ್ಧ ಅರಣ್ಯ ಇಲಾಖೆಯ ಅಂಕೋಲಾ ವಿಭಾಗದ ಆರ್‌ಎಫ್‌ಒ ಪ್ರಕರಣ ದಾಖಲಿಸಿದ್ದಾರೆ.