ಶಿರಸಿ: ಶಾಸಕ ಭೀಮಣ್ಣರ ಅಭಿವೃದ್ಧಿ ನೋಡಿ ಬಿಜೆಪಿಗರು ಮಾತನಾಡಲಿ : ಪತ್ರಿಕಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರವೀಣ್ ಗೌಡರ್
ಶಿರಸಿ : ಶಾಸಕ ಭೀಮಣ್ಣ ನಾಯ್ಕ ಶಾಸಕರಾಗಿ ಕೇವಲ ಎರಡು ವರ್ಷದಲ್ಲಿ ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರು ಅಭಿವೃದ್ಧಿಗೆ ನೀಡಿದ ಅನುದಾನ ಒಮ್ಮೆ ನೋಡಿ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆರೋಪ ಮಾಡಲಿ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಯುವ ಮುಖಂಡ ಪ್ರವೀಣ ಗೌಡರ್ ತೆಪ್ಪಾರ ತಿರುಗೇಟು ನೀಡಿದರು. ಅವರು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸಕ ಭೀಮಣ್ಣ ನಾಯ್ಕ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿರುವುದನ್ನು ಅನಂತಮೂರ್ತಿ ಹೆಗಡೆ ಒಮ್ಮೆ ಗಮನಿಸುವುದು ಒಳಿತು ಎಂದು ಹೇಳಿದರು.