ಸಿದ್ಧಾಪುರ: ಭುವನಗಿರಿ ಸಮೀಪ ವಿದ್ಯುತ್ ಲೈನ್ ತಾಗಿ ಹುಲ್ಲು ತುಂಬಿದ ಲಾರಿಗೆ ಬೆಂಕಿ
ಸಿದ್ದಾಪುರ : ವಿದ್ಯುತ್ ಲೈನ್ ತಾಗಿ ಹುಲ್ಲು ತುಂಬಿದ್ದ ವಾಹನಕ್ಕೆ ಬೆಂಕಿ ತಗುಲಿ ವಾಹನ ಸುಟ್ಟು ಕರಕಲಾದ ಘಟನೆ ಸಿದ್ದಾಪುರ ತಾಲೂಕಿನ ಭುವನಗಿರಿ ಬಳಿ ಶನಿವಾರ ನಡೆದಿದೆ. ತಾಲೂಕಿನ ಬಳ್ಳಟ್ಟೆ ಯಿಂದ ಹಸ್ವಿಗುಳಿ ಗೆ ಹೋಗುತ್ತಿದ್ದ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದೆ. ವಾಹನದಲ್ಲಿ 3 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸಲು ಸಹಕರಿಸಿದೆ. ಆದರೆ ಸಣ್ಣ ಅಗ್ನಿ ಶಾಮಕವಾದ ಕಾರಣ ಹುಲ್ಲಿನ ಹೊರೆಗಳು ಸಂಪೂರ್ಣ ಸುಟ್ಟುಹೋಗಿದೆ.