ಸಿದ್ಧಾಪುರ: ಚಂದ್ರಘಟಗಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 7 ದನಕರುಗಳು ಸಜೀವ ದಹನ
ಸಿದ್ದಾಪುರ : ಸಿದ್ದಾಪುರದಲ್ಲಿ ಬೆಂಕಿಯ ಕೆನ್ನಾಲಿಗಿದೆ 7 ಜಾನುವಾರುಗಳು ಮೃತಪಟ್ಟ ಹೃದಯ ವಿದ್ರಾಹಕ ಘಟನೆ ನಡೆದಿದೆ. ಸಿದ್ದಾಪುರ ತಾಲೂಕಿನ ಚಂದ್ರಘಟಗಿ ಗ್ರಾಮದಲ್ಲಿರುವ ಮಹೇಶ ಗಣಪತಿ ಹೆಗಡೆ ಇವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ ದನಕರುಗಳು ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿ ಹೋಗಿವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ನಡೆದಿದ್ದು, ಶಾರ್ಟ ಸರ್ಕ್ಯೂಟ್ ನಿಂದ ಕೊಟ್ಟಿಗೆಯ ಅಟ್ಟದ ಹುಲ್ಲಿಗೆ ಮೊದಲು ಬೆಂಕಿ ಬಿದ್ದಿದೆ. ನಂತರ ವ್ಯಾಪಿಸಿ ೭ ದನಕರುಗಳು ಸಜೀವ ದಹನಗೊಂಡಿದೆ.