ಸಿದ್ಧಾಪುರ: ಶಂಕರ ಮಠದಲ್ಲಿ ಸಂಭ್ರಮದಿಂದ ನಡೆದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ : ಜೋಗ ಸರ್ಕಲ್ ನಿಂದ ಸಾಂಸ್ಕೃತಿಕ ಮೆರವಣಿಗೆ
ಸಿದ್ದಾಪುರ : ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಸಿದ್ದಾಪುರ ತಾಲೂಕಾ ೭ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಂಭ್ರಮದಿಂದ ನಡೆಯಿತು. ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಾಹಿತಿಗಳ ಪರಿಕಲ್ಪನೆ ಕೇವಲ ಪುಸ್ತಕಗಳಿಗೆ ಸೀಮಿತವಾಗದೇ ಅದು ಕಾರ್ಯರೂಪಕ್ಕೆ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯಾಗಿವೆ. ಕ್ಷೇತ್ರದಲ್ಲಿರುವ ಪಂಚಾಯತ ವಾಚನಾಲಯಗಳಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದ ಸಾಹಿತಿಗಳ ಪುಸ್ತಕ ಇಡಲು ಶಾಸಕರ ನಿಧಿಯಿಂದ ವ್ಯವಸ್ಥೆಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.