ಸಿದ್ಧಾಪುರ: ಬ್ಯಾಟಗೋಡ ಗ್ರಾಮದಲ್ಲಿ ಕಾಲು ಸಂಕ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ
ಸಿದ್ದಾಪುರ : ತಾಲೂಕಿನ ಬ್ಯಾಟಗೋಡ ಗ್ರಾಮದಲ್ಲಿನ ನೂತನ ಕಾಲು ಸಂಕ ಉದ್ಘಾಟನೆ ಸೇರಿದಂತೆ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲಿ ಭಾಗಿಯಾದರು. ವಾಜಗೋಡು ಪಂಚಾಯತ್ ವ್ಯಾಪ್ತಿಯ ಗಿಳಸೆ ಕುಂಬ್ರಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಲುಸಂಕದ ಶಂಕು ಸ್ಥಾಪನೆ, ತಾಲೂಕಿನ ಇಟಗಿ ಪಂಚಾಯತ್ ವ್ಯಾಪ್ತಿಯ ಹೊನ್ನೆಮಡಕಿಯಲ್ಲಿ ನೂತನ ಕಾಲುಸಂಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾದರು. ಈ ವೇಳೆ ಆಯಾ ಭಾಗದ ಮುಖಂಡರು, ಅಧಿಕಾರಿಗಳು ಇದ್ದರು.