ಸಿದ್ಧಾಪುರ: ತ್ಯಾಗಲಿಯಲ್ಲಿ ಕಾರು-ಬೈಕ್ ಡಿಕ್ಕಿ, ಓರ್ವ ಸಾವು
ಸಿದ್ದಾಪುರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ತ್ಯಾಗಲಿಯಲ್ಲಿ ಶುಕ್ರವಾರ ನಡೆದಿದೆ. ಶಿರಸಿಯ ಕಸ್ತೂರಬಾನಗರದ ಫೈಜುಲ್ಲಾ ಅಬ್ದುಲ್ ಸತ್ತಾರ ಚೂಡಿದಾರ(42) ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಶಿರಸಿ ಕಡೆಯಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಕಾರಿನ ಚಾಲಕ ಧಾರವಾಡ ಜಿಲ್ಲೆ ತಿಮ್ಮಾಪುರದ ಹನುಮಂತ ಆನಂದ ಗೌಡ ತ್ಯಾಗಲಿ ತಿರುವಿನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷದಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಬೈಕಿಗೆ ರಾಂಗ್ ಸೈಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಫೈಜುಲ್ಲಾ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.