ಆಗಸ್ಟ್ 12ರ ರಾತ್ರಿ 10 ಗಂಟೆ ಸುಮಾರಿಗೆ ಕಬ್ಬನ್ ಪಾರ್ಕ್ ಸಮೀಪದ ಬಾಲ ಭವನದಲ್ಲಿ ಮರ ಧರೆಗೆ ಉರುಳಿದೆ. ಹೆಮ್ಮರ ಉರುಳಿರುವ ಪರಿಣಾಮ ಯಾರಿಗೂ ಯಾವುದೇ ಸಮಸ್ಯೆ ಸಂಭವಿಸಿಲ್ಲ. ವೀಕೆಂಡ್ ಬಂತು ಅಂದ್ರೆ ಅತೀ ಹೆಚ್ಚಿನ ಮಕ್ಕಳು ವಿಸಿಟ್ ಮಾಡುವ ಜಾಗ ಬಾಲಭವನ. ಹೀಗಾಗಿ ಮಕ್ಕಳಿಲ್ಲದ ಹೊತ್ತಲ್ಲಿ ಮರ ಉರುಳಿದ್ದರಿಂದ ಮಕ್ಕಳು ಬಚಾವ್ ಆಗಿದ್ದಾರೆ. ಕಾಂಕ್ರಿಟೀಕರಣ ಇನ್ನಿತರೆ ಕಾರಣಗಳಿಂದ ಹಸಿ ಮರ ಧರೆಗುರುಳಿದೆ ಅಂತ ಪರಿಸರ ಪ್ರೇಮಿಗಳ ಕಣ್ಣು ಕೆಂಪು ಮಾಡಿದೆ.