ಬೆಂಗಳೂರು ಉತ್ತರ: ಧರ್ಮಸ್ಥಳದಲ್ಲಿ ಮತ್ತೆ ಗುಂಡಿ ತೋಡುವುದಿಲ್ಲ: ನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ
ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿ ನಿನ್ನೆ CLP ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಈ ಕುರಿತಂತೆ ಬುಧವಾರ ಮಧ್ಯಾಹ್ನ 1:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಧರ್ಮಸ್ಥಳ ವಿಚಾರವಾಗಿ ಗೊಂದಲ ಇದ್ದಾಗಿಂದಲೂ ನೋಡಿದ್ದೇವೆ. ಸೌಜನ್ಯ ಕೇಸ್ ಇದ್ದಾಗ ರಾಜ್ಯ ಸರ್ಕಾರ ಚಿಂತನೆ ಮಾಡಿತ್ತು. ಅನಾಮಿಕ ಕೊರ್ಟಿಗೆ ಹೋಗಿ ಗುಂಡಿ ತೋರಿಸಿದ್ದ. ಧಾರ್ಮಿಕ ಕ್ಷೇತ್ರದಲ್ಲಿ ಒಳ್ಳೆಯ ರೀತಿ ನಡೆಸಿಕೊಂಡು ಹೋಗಬೇಕು. ತಿಮ್ಮರೋಡಿ ಎಲ್ಲಾ ರಗಳೆ ಮಾಡಿದ ಮೇಲೆ SITಗೆ ಕೊಡಲಾಗಿತ್ತು. ಕೋರ್ಟಿಂದ ಆದೇಶ ಆದಾಗ ಖರ್ಚು ನೋಡಲು ಆಗಲ್ಲ. ಅನಾಮಿಕ ಹೇಳಿದ ಕಡೆ ಗುಂಡಿ ತೆರೆಯಲಾಗಿದೆ. ಅನಾಮಿಕ ಸರಿ ಇದೆಯೋ, ಇಲ್ಲವೋ ಗೊತ್ತಿಲ್ಲ. SIT ಮಧ್ಯಂತರ ವರದಿ ಕೊಡಲ್ಲ.