ಮಡಿಕೇರಿ: ಮಡಿಕೇರಿ ರಾಜಾಸೀಟು ರಸ್ತೆಯ ಮರಗಳ ಕಡಿತಲೆಗೆ ವಿರೋಧ: ಸದ್ಯಕ್ಕೆ ಅನುಮತಿ ಇಲ್ಲ
ಮಡಿಕೇರಿ ರಾಜಾಸೀಟು ರಸ್ತೆ ಅಭಿವೃದ್ಧಿಗಾಗಿ 12 ಅತ್ತಿ ಮರಗಳನ್ನು ಕಡಿಯಲು ನಗರಸಭೆ ಮುಂದಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮರ ಕಡಿಯದೆಯೇ ಕಾಮಗಾರಿ ನಡೆಸಲು ಸಾರ್ವಜನಿಕರು ಮನವಿ ಮಾಡಿದ್ದು, ಸದ್ಯಕ್ಕೆ ಮರ ಕಡಿಯಲು ಅನುಮತಿ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.