ಸಿದ್ಧಾಪುರ: ಪಟ್ಟಣದಲ್ಲಿ ರಾಜ್ಯಮಟ್ಟದ ಡೊಳ್ಳುಕುಣಿತ ಸ್ಪರ್ಧೆ
ಸಿದ್ದಾಪುರ : ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ವತಿಯಿಂದ ಸಿದ್ದಾಪುರ ಪಟ್ಟಣದ ನೆಹರೂ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಅಪರೂಪದ ಜಾನಪದ ಕಲೆಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ ಡೊಳ್ಳಿನ ಸಂಘ ಕೊಡಗಿಬೈಲ್ ಸಿದ್ದಾಪುರ ದ್ವಿತೀಯ ಹಾಗು ಕನ್ನಡ ಜಾನಪದ ಕಲಾತಂಡ ಹೊಸಕೊಪ್ಪ ಸಾಗರ ತಂಡ ತೃತೀಯ ಸ್ಥಾನಗಳಿಸಿದೆ. ಸಿದ್ದಾಪುರದಲ್ಲಿ ಮೊದಲ ಬಾರಿಗೆ ನಡೆದ ಈ ಡೊಳ್ಳು ಕುಣಿತ ಸ್ಪರ್ಧೆಯನ್ನು ಸಾವಿರಾರು ಜನರು ಕೊರೆವ ಚಳಿಯನ್ನು ಲೆಕ್ಕಿಸದೆ ಡೊಳ್ಳು ಕುಣಿತದ ಮೋಜು ಅನುಭವಿಸಿದರು.