ಸಿದ್ಧಾಪುರ: ಕಾಂಗ್ರೆಸ್ ಮುಖಂಡರು ಹಣ ಕೇಳಿಲ್ಲ ಎಂದು ಆಣೆ ಮಾಡಲಿ, ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಡಲಾಧ್ಯಕ್ಷ ತಿಮ್ಮಪ್ಪ ಮಡಿವಾಳ
ಸಿದ್ದಾಪುರ : ಸಿದ್ದಾಪುರದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಆಣೆ ಪ್ರಮಾಣ ದೇವಸ್ಥಾನದ ಮೆಟ್ಟಿಲೆರಿದ್ದು, ಈಗ ಬಿಜೆಪಿ ಸಿದ್ದಾಪುರ ಮಂಡಲಾಧ್ಯಕ್ಷ ತಿಮ್ಮಪ್ಪ ಮಡಿವಾಳ ಸವಾಲು ಹಾಕಿದ್ದಾರೆ. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಸೇರಿದಂತೆ ಅವರ ಪಕ್ಷದವರು ಯಾವ ಅಧಿಕಾರಿಗಳ ಹತ್ತಿರವೂ ಹಣ ಕೇಳಿಲ್ಲ ಎಂದು ಶಿರಸಿ ಮಾರಿಕಾಂಬಾ ದೇವರ ಮೇಲೆ ಆಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ. ಅಲ್ಲದೇ ತಾವು ಈ ಹಿಂದೆ ಕಾಗೇರಿ ಅವರ ಕಾರ್ಯಕ್ರಮಕ್ಕೆ ಯಾರ ಬಳಿಯೂ ಹಣ ಕೇಳಿಲ್ಲ. ಕೇಳಿದ್ದಲ್ಲಿ ಆ ಅಧಿಕಾರಿ ಎಲ್ಲಿ ಯಾವಾಗ ಎಷ್ಟು ಹಣ ನೀಡಿದ್ದರು ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.