ಸಿದ್ಧಾಪುರ: ಕಾಂಗ್ರೆಸ್ ಮುಖಂಡರ ಮೇಲಿನ ಆರೋಪ ಸಾಬೀತಿಗೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಸವಾಲು
ಸಿದ್ದಾಪುರ : ಸಿದ್ದಾಪುರದ ಬಿಜೆಪಿ ಮಂಡಲ ಅದ್ಯಕ್ಷ ತಿಮ್ಮಪ್ಪ ಮಡಿವಾಳ ಕಾಂಗ್ರೆಸ್ ಮುಖಂಡರ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿ ಸವಾಲೆಸೆದಿರುವ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಸಂತ ನಾಯ್ಕ್ ದೇವರ ಪ್ರಮಾಣ ಮಾಡಲು ಆಗ್ರಹಿಸಿದ್ದಾರೆ.ಮಂಗಳವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವದು, ಬಿಜೆಪಿಯವರ ಪ್ರಕಾರ ಯಾವ ತಾಲೂಕಾ ಮಟ್ಟದ ಕಾಂಗ್ರೆಸ್ ಮುಖಂಡರಿಗೆ ಯಾವ ಅಧಿಕಾರಿ ಹಣ ನೀಡಿದ್ದಾರೆಂದು ದೇವರ ಮೇಲೆ ಪ್ರಮಾಣಮಾಡಿ ಹೇಳಬೇಕು. ಇಲ್ಲವಾದರೆ ನಾನು ಕಾಗೇರಿಯವರ ಅಭಿನಂದನಾ ಕಾರ್ಯಕ್ರಮಕ್ಕೆ ತಿಮ್ಮಪ್ಪ ಮಾಡಿವಾಳ ಅದಿಕಾರಿಯವರೊಂದಿಗೆ ಹಣ ಕೇಳಿದ್ದನ್ನು ಅವರು ಹೇಳಿದಲ್ಲಿ ಬಂದು ದೇವರ ಮೇಲೆ ಪ್ರಮಾಣ ಮಾಡುವದಾಗಿ ಹೇಳಿದರು.