ಸಿದ್ಧಾಪುರ: ಗೋಮಾಳದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಮನ್ಮನೆ ಗ್ರಾಮಸ್ಥರ ವಿರೋಧ, ಸಿದ್ದಾಪುರದಲ್ಲಿ ಪ್ರತಿಭಟನಾ ಮೆರವಣಿಗೆ
ಸಿದ್ದಾಪುರ : ತಾಲೂಕಿನ ಮನ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲವಳ್ಳಿಯಲ್ಲಿ ಗೋಮಾಳದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರಿಂದಪಟ್ಟಣದಲ್ಲಿ ಬುಧವಾರ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಕೈಗಾರಿಕಾ ವಸಾಹತು ಜಾಗವು ಗೋಮಾಳ ಆಗಿರುವುದರಿಂದ ಜಾನುವಾರುಗಳ ಮೇವಿಗೆ ಮೀಸಲಿಡಲಾಗಿದೆ. ಆದ್ದರಿಂದ ಅಲ್ಲಿ ಯಾವ ಕಾರಣಕ್ಕೂ ಕಾಮಗಾರಿ ನಡೆಸಬಾರದು ತಾಲೂಕಾ ಆಡಳಿತಕ್ಕೆ ಆಗ್ರಹಿಸಿ ಮಳವಳ್ಳಿ ಗ್ರಾಮಸ್ಥರು ಪಟ್ಟಣದಲ್ಲಿ ಹೊಸುರು ಸರ್ಕಲ್ ನಿಂದ ತಹಶೀಲ್ದಾರ ಕಚೇರಿಯವರೆಗೆ ಜಾನುವಾರು ಗಳೊಂದಿಗೆ ವಿನೂತನವಾಗಿ ಬೃಹತ್ ಪ್ರತಿಭಟನೆ ನಡೆಸಿದರು.ಬಳಿಕ ತಹಶೀಲ್ದಾರ ಕಚೇರಿ ಮುಖಾಂತರ ಮನವಿ ಸಲ್ಲಿಸಲಾಯಿತು