ಸಿದ್ಧಾಪುರ: ತಾಲೂಕಿನ ಶಿರಗುಣಿಯಲ್ಲಿ ಜರುಗಿದ ಪ್ರೌಢಶಾಲಾ ರಜತ ಮಹೋತ್ಸವ : ಶಾಸಕ ಭೀಮಣ್ಣ ಭಾಗಿ
ಸಿದ್ದಾಪುರ : ತಾಲೂಕಿನ ಶಿರಗುಣಿಯ ಸರಕಾರಿ ಪ್ರೌಢಶಾಲೆಯು ರಜತ ಮಹೋತ್ಸವ ಕಾರ್ಯಕ್ರಮವು ಭಾನುವಾರ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರೌಢಶಾಲೆಯು ರಜತ ಮಹೋತ್ಸವ ಆಚರಣೆ ಮಾಡುತ್ತಿದೆ ಎಂದರೆ ಅದರ ಸಂಪೂರ್ಣವಾದ ಶ್ರೇಯಸ್ಸು ಅಂದು ಶಾಲೆ ತೆರೆಯಲು ಆಸಕ್ತಿ ವಹಿಸಿದ್ದ ಗ್ರಾಮಸ್ಥರಿಗೆ ಮತ್ತು ಅಂದಿನ ಜನಪ್ರತಿನಿದಿಗಳಿಗೆ ಸಲ್ಲಬೇಕು. ಶಿಕ್ಷಣ ವ್ಯವಸ್ಥೆಗೆ ಎಲ್ಲಾ ಸರ್ಕಾರಗಳೂ ಸಹಕಾರ ನೀಡುತ್ತಲೇ ಬಂದಿದೆ. ನನ್ನ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಪ್ರಮುಖರು, ಅಧಿಕಾರಿಗಳು ಇದ್ದರು.