ಕಾಗದಕ್ಕಷ್ಟೇ ಸೀಮಿತವಾಯಿತೇ ಜುಗೂಳ ಗ್ರಾ.ಪಂ. 'ಕಸ ಹಾಕಬೇಡಿ' ಎಚ್ಚರಿಕೆ ಬೋರ್ಡ್? – ಪ್ರಯೋಜನವಿಲ್ಲ?
ಕಾಗವಾಡ:
ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಬೋರ್ಡ್ ಒಂದನ್ನು ಅಳವಡಿಸಿದೆ. ಅದರಲ್ಲಿ "ಸಾರ್ವಜನಿಕರಿಗೆ ಸೂಚನೆ: ಇಲ್ಲಿ ಕಸವನ್ನು ಯಾರೂ ಹಾಕಬಾರದು, ಕಸ ಹಾಕಿದರೆ ₹500 ದಂಡ ವಿಧಿಸಲಾಗುವುದು" ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಆದರೆ ವಾಸ್ತವ ಸ್ಥಿತಿ ಮಾತ್ರ ಸಂಪೂರ್ಣ ಭಿನ್ನವಾಗಿದೆ!
ಅದೇ ಎಚ್ಚರಿಕೆ ಫಲಕದ ಕೆಳಭಾಗದಲ್ಲೇ ಪ್ಲಾಸ್ಟಿಕ್ ಚೀಲಗಳು, ಅಪಾಯಕಾರಿ ತ್ಯಾಜ್ಯ ಹಾಗೂ ಗಲೀಜು ವಸ್ತುಗಳು ರಾಶಿ ಬಿದ್ದಿದ್ದು, ಗ್ರಾಮ ಪಂಚಾಯತಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ. ಬೋರ್ಡ್ ಹಾಕಿ ತನ್ನ ಜವಾಬ್ದಾರಿ ಮುಗಿಯಿತು ಎಂಬಂತೆ ಅಧಿಕಾರಿಗಳು ಸುಮ್ಮನಿದ್ದರೆ, ಸಾರ್ವಜನಿಕರೂ ಕೂಡ ಯಾವುದೇ ಭಯ-ಬೆದರಿಕೆಯಿಲ್ಲದೆ ಬೋರ್ಡ್ ಕೆಳಗಡೆಯೇ ಕಸ ಚೆಲ್ಲುತ್ತಿದ್ದಾರೆ.
ದೃಶ್ಯಾವಳಿಯಲಿ ನೋಡಬಹುದು ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅನ್ನುತ್ತಿದ್ದರು ಇತ್ತ ಕಡೆ ಗಮನಹರಿಸುತ್ತಿಲ್ಲ?
ಬೋರ್ಡ್ ಹಾಕಿ ಕೈತೊಳೆದುಕೊಂಡರೆ ಗ್ರಾಮ ಸ್ವಚ್ಛವಾಗುತ್ತದೆಯೇ?
ದಂಡ ವಿಧಿಸುವ ನಿಯಮವನ್ನು ಕೇವಲ ಹೆಸರಿಗೆ ಮಾತ್ರ ಇಡಲಾಗಿದೆಯೇ ಅಥವಾ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದೇ?
ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಆಡಳಿತ ಮಂಡಳಿಯವರು ತಕ್ಷಣವೇ ಜಾಗೃತರಾಗಬೇಕು. ಬೋರ್ಡ್ ಕೆಳಗೆ ಬಿದ್ದಿರುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಬೇಕೆಂದು
ಇನ್ನಾದ್ರೂ ಗ್ರಾಮ್ ಪಂಚಾಯತಿ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದ ಸಚಿವರು ರಾಜ್ಯಪಾಲರು ರಾಷ್ಟ್ರಪತಿಗಳು ಇತ್ತಕಡೆ ಗಮನಹರಿಸಿ ಸ್ವಚ್ಛತೆ ಇಡುವ ಹಾಗೆ ಮಾಡುತ್ತಾರೆ ಯಥಾಸ್ತುತಿ ಮುಂದುವರೆಸುತ್ತಾರೆ
Yadgir, Yadgir | Oct 8, 2026