ಮಡಿಕೇರಿ: ಸಾವಿನಲ್ಲೂ ಸಾರ್ಥಕತೆ ಮೆರೆದ 22ರ ಯುವಕ ಯೋಗೇಶ್; ಅಂಗಾಂಗ ದಾನದಿಂದ ಹಲವರಿಗೆ ಹೊಸ ಬದುಕು
ಮಡಿಕೇರಿಯ 22 ವರ್ಷದ ಯೋಗೇಶ್ ಅಂಗಾಂಗ ದಾನದ ಮೂಲಕ ಹಲವು ಜೀವಗಳಿಗೆ ಬೆಳಕಾಗಿದ್ದಾನೆ. ಬ್ರೈನ್ ಡೆಡ್ ಆಗಿದ್ದ ಮಗನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ರಕ್ತದಾನ ಮಾಡಿದ್ದ ಯೋಗೇಶ್, ಇದೀಗ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾನೆ.