ಮಡಿಕೇರಿ: ಕೊಡಗಿನಲ್ಲಿ ಹುತ್ತರಿ ಹಬ್ಬದ ದಿನಾಂಕ ನಿಗದಿ: ನವೆಂಬರ್ 25 ಕ್ಕೆ ಕದಿರು ತೆಗೆಯುವ ಸಂಭ್ರಮ
ಕೊಡಗು ಜಿಲ್ಲೆಯ ಹುತ್ತರಿ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 25 ರ ಸಂಜೆ ರೋಹಿಣಿ ನಕ್ಷತ್ರದಲ್ಲಿ ಹಬ್ಬ ಆಚರಿಸಲು ಮುಹೂರ್ತ ಫಿಕ್ಸ್ ಆಗಿದೆ. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಜೆ 6:05ಕ್ಕೆ ನೆರೆ ಕಟ್ಟುವುದು, 7:05ಕ್ಕೆ ಕದಿರು ತೆಗೆಯುವುದು. ಉಳಿದ ಕಡೆಗಳಲ್ಲಿ 6:25 ಮತ್ತು 7:25 ಕ್ಕೆ ಸಮಯ ನಿಗದಿ.