ಸಿದ್ಧಾಪುರ: ಕಲಗದ್ದೆಯಲ್ಲಿ ತಡರಾತ್ರಿ ಭತ್ತದ ಗದ್ದೆಗೆ ನುಗ್ಗಿ ಒಂಟಿ ಸಲಗ ದಾಂದಲೆ
ಸಿದ್ದಾಪುರ : ಭತ್ತದ ಗದ್ದೆಗೆ ನುಗ್ಗಿ ಒಂಟಿ ಸಲಗವೊಂದು ದಾಂದಲೆ ಮಾಡಿದ ಘಟನೆ ತಾಲೂಕಿನ ನಾಣಿಕಟ್ಟಾ ಸಮೀಪದ ಕಲಗದ್ದೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ರಾತ್ರಿ ಗದ್ದಗೆ ನುಗ್ಗಿ ಭತ್ತದ ಪೈರನ್ನು ಆನೆ ತಿಂದಿದೆ. ಶಬ್ದ ಕೇಳಿ ಬಂದ ಗ್ರಾಮಸ್ಥರು ಒಂಟಿ ಸಲಗವನ್ನು ನೋಡಿ ಬೆದರಿದ್ದಾರೆ. ಬಳಿಕ ಸದ್ದು ಮಾಡಿ ಆನೆಯನ್ನು ಗದ್ದೆಯಿಂದ ಗ್ರಾಮಸ್ಥರು ಓಡಿಸಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಫಸಲಿಗೆ ಬಂದ ಪೈರು ಆನೆ ಹಾವಳಿಯಿಂದ ಕೈಗೆ ಸಿಗದಂತಾಗಿದೆ. ಕಾರಣ ಅರಣ್ಯ ಇಲಾಖೆ ತುರ್ತು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.