ಕೋಲಾರ: ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನಗರದಲ್ಲಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ
Kolar, Kolar | Nov 5, 2025 ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನಗರದಲ್ಲಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆಯಾದರು. ಮುನಿರಾಜು ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದ ನಿರ್ದೇಶನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬ್ಯಾಂಕ್ನ ೧೨ ನಿರ್ದೇಶಕರ ಸ್ಥಾನಕ್ಕೆ (ಒಟ್ಟು ೧೮ ನಿರ್ದೇಶಕರ ಪೈಕಿ ೬ ಮಂದಿ ಅವಿರೋಧ ಆಯ್ಕೆ) ಮೇ ೨೮ರಂದು ಚುನಾವಣೆ ನಡೆದಿತ್ತು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೧೨ ಮತಗಳು ಇದ್ದವು. ಅದರಲ್ಲಿ ಆಗ ಮುನಿರಾಜು ೫ ಮತ ಹಾಗೂ ಮೈತ್ರಿಕೂಟದ ಆನಂದ್ ೬ ಮತ ಪಡೆದಿದ್ದರು