ಬೆಂಗಳೂರು ದಕ್ಷಿಣ: ನಗರದಲ್ಲಿ ಪಾಲಿಕೆಯ ಆಯುಕ್ತರಿಂದ 3 ಕಿ.ಮೀ ಪಾದಯಾತ್ರೆ: ಸ್ಥಳದಲ್ಲೇ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕೆ ಸೂಚನೆ
ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮತ್ತು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್, ನಾಗರೀಕರೊಡನೆ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬ್ರಿಗೇಡ್ ಮಿಲೇನಿಯಂನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 3 ಕಿಲೋಮೀಟರ್‌ಗಳ ಸುದೀರ್ಘ ಪಾದಯಾತ್ರೆ ನಡೆಸಿದರು. ಸ್ಥಳೀಯ ಶಾಸಕರಾದ ಎಂ. ಕೃಷ್ಣಪ್ಪ ಅವರು ಪಾದಯಾತ್ರೆಗೆ ಜೊತೆಗೂಡಿದ್ದು ವಿಶೇಷವಾಗಿತ್ತು. ಈ ಪಾದಯಾತ್ರೆಯ ಉದ್ದಕ್ಕೂ ಆರ್‌ಬಿಐ ಬಡಾವಣೆ, ಈಶ್ವರ ಬಡಾವಣೆ, ಸದಾನಂದಪ್ಪ ಬಡಾವಣೆ ಹಾಗೂ ಗಣಪತಿಪುರದ ನೂರಾರು ನಿವಾಸಿಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಆಯುಕ್ತರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.