ಬೆಂಗಳೂರು ದಕ್ಷಿಣ: ಗ್ಯಾಸ್ ಬ್ಲಾಸ್ಟ್! ಎಲೆಕ್ಟ್ರಾನಿಕ್ ಸಿಟಿ ಅಲ್ಲಿ ಹೊತ್ತಿ ಉರಿದ ತೆಂಗಿನ ಮರ
ಗ್ಯಾಸ್ ಬ್ಲಾಸ್ಟ್ ಆಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತೆಂಗಿನ ಮರ ಒಂದು ಹೊತ್ತಿ ಉರಿದಿರುವಂತಹ ಘಟನೆ ಡಿಸೆಂಬರ್ 23 ರಂದು ಬೆಳಕಿಗೆ ಬಂದಿದೆ. ಇಮ್ತಿಯಾಜ್ ಅನ್ನುವಂತಹ ವ್ಯಕ್ತಿ ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡ್ತಿದ್ದು ಇದರಿಂದ ಈ ರೀತಿಯಾದ ಘಟನೆಯಾಗಿದೆ ಎನ್ನಲಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ