ಸಿದ್ಧಾಪುರ: ಪಟ್ಟಣದ ಗಾರ್ಡನ್ ಸರ್ಕಲ್ ಬಳಿ ಬಂಗಾರಪ್ಪನವರ ಜನ್ಮದಿನ ಆಚರಣೆ: ಸಚಿವ ಮಧು ಬಂಗಾರಪ್ಪ ಭಾಗಿ
ಸಿದ್ದಾಪುರ: ದಿ. ಬಂಗಾರಪ್ಪ ನವರು ನಮ್ಮೊಂದಿಗಿಲ್ಲದಿದ್ದರು ಲಕ್ಷಾಂತರ ಅಭಿಮಾನಿಗಳಲ್ಲಿ ಬಂಗಾರಪ್ಪಜಿಯವರನ್ನು ಕಾಣುತ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಿದ್ದಾಪುರದ ಗಾರ್ಡನ್ ಸರ್ಕಲ್ ಬಳಿ ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿಗಳಿಂದ ಏರ್ಪಡಿಸಿದ್ದ ಬಂಗಾರಪ್ಪ ಅವರ 92ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಭಿಮಾನಿಗಳಿಂದಲೇ ಬಂಗಾರಪ್ಪ ಅಷ್ಟು ಎತ್ತರಕ್ಕೆ ಬೆಳೆದಿದ್ದರು. ಬಂಗಾರಪ್ಪ ಬಿಟ್ಟು ಹೋದ ಕೆಲಸಗಳನ್ನು ನಾವೆಲ್ಲಾ ಸೇರಿ ಮಾಡೋಣ. ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಇರುವ ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಜತೆ ನಾನಿರುತ್ತೇನೆ ಎಂದರು.