ಬೆಂಗಳೂರು ಉತ್ತರ: ಜಾತಿಗಣತಿ ಮರು ಸರ್ವೇಗೆ ಶಿಕ್ಷಕರ ಸಮಸ್ಯೆ ಆಗಲಿದೆ: ನಗರದಲ್ಲಿ ಮಾಜಿ ಸಚಿವ ಆಂಜನೇಯ
ಒಳ ಮೀಸಲಾತಿ ವಿಚಾರವಾಗಿ ಆನಂದ್ ರಾವ್ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಸಭೆ ನಡೆದಿದ್ದು, ಸಭೆ ಬಳಿಕ ಮಾಧ್ಯಮಗಳ ಜೊತೆ ಮಧ್ಯಾಹ್ನ 1:40 ರ ಸುಮಾರಿಗೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು, ನಾನು ಹಿಂದೆ ಸಚಿವನಾಗಿದ್ದಾಗ ಒಂದೂವರೆ ಲಕ್ಷ ಶಿಕ್ಷಕರು ಇದ್ದಾಗ ಸಮೀಕ್ಷೆ ಮಾಡಿದ್ವಿ. ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ಆಗಿತ್ತು. ಆ ವರದಿ ಸ್ವೀಕಾರ ಮಾಡಬೇಕಿತ್ತು, ಯಾವ ಜನಾಂಗ ಒಳಗೊಂಡಿಲ್ಲ ಅನ್ನೋದು ನೋಡಬೇಕಿತ್ತು. ಸರ್ವೇ ಮಾಡಿದ್ದ ಕಾಪಿ ಬಹಿರಂಗ ಪಡಿಸಬೇಕಿತ್ತು. ಯಾವ ಹಳ್ಳಿ, ಮನೆ ಬಿಟ್ಟಿದ್ದಾರೆ ಅಂತ ನೋಡಬೇಕಿತ್ತು. ಆದ್ರೆ ಸರ್ಕಾರ ಪಕ್ಷ ಹೊಸ ಸಮೀಕ್ಷೆ ಮಾಡಬೇಕು ಎಂದಿದೆ. ಹೊಸದಾಗಿ ಸಮೀಕ್ಷೆ ಮಾಡೋಕೆ ಹೊರಟಿದ್ದಾರೆ.