ಬೆಂಗಳೂರು ಉತ್ತರ: ಕಾಲ್ತುಳಿತ ಪ್ರಕರಣ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳೆದುರು ಹೇಳಿಕೆ ದಾಖಲಿಸಿದ ಆರ್ಸಿಬಿ ಮುಖ್ಯಸ್ಥ
ಸಂಭ್ರಮಾಚರಣೆ ವೀಕ್ಷಿಸುವ ಭರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯಸ್ಥ ರಾಜೇಶ್ ಮೆನನ್ ಅವರು ಜಿಲ್ಲಾಧಿಕಾರಿಗಳೆದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಜೂನ್ 13ರಂದು ಸಂಜೆ 5:30ರ ಸುಮಾರಿಗೆ ಕೆ.ಜಿ.ರಸ್ತೆಯಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಕಚೇರಿಗೆ ಆಗಮಿಸಿದ ರಾಜೇಶ್ ಮೆನನ್ ಅವರು, ತಂಡದ ಸಂಭ್ರಮಾಚರಣೆಯ ದಿನದ ವಿದ್ಯಮಾನಗಳ ಕುರಿತು ತಮ್ಮ ಹೇಳಿಕೆ ದಾಖಲಿಸಿದರು.ಬಳಿಕ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.