ಬೆಂಗಳೂರು ಉತ್ತರ: ಚೂಡಿದಾರ್ ಪೀಸ್ಗಳಲ್ಲಿ 10 ಕೋಟಿ ಮೌಲ್ಯದ ಎಂಡಿಎಂಎ: ನಗರದಲ್ಲಿ ನೈಜೀರಿಯಾದ ಯುವತಿ ಬೆಂಗಳೂರಿನಲ್ಲಿ ಅರೆಸ್ಟ್ -
ದೆಹಲಿಯಿಂದ ಬಸ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೆಜೆಸ್ಟಿಕ್ ಬಳಿ ಬಂಧಿಸಿದ್ದಾರೆ. ಯುವತಿಯಿಂದ 10 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಪೊಲೀಸರ ಕಣ್ತಪ್ಪಿಸಲು ಕವರ್ನಲ್ಲಿ ಪ್ಯಾಕ್ ಮಾಡಿ ಚೂಡಿದಾರ್ ಡ್ರೆಸ್ ಪೀಸ್ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ನಗರಕ್ಕೆ ತಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನೈಜೀರಿಯಾ ಮೂಲದ ಪ್ರಿನ್ಸೆಸ್ (25) ಬಂಧಿತೆ. ಆರೋಪಿಯಿಂದ 5.325 ಕೆ.ಜಿ.ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್, ಒಂದು ಆ್ಯಪಲ್ ಮೊಬೈಲ್ ಹಾಗೂ 11 ಜೊತೆ ಹೊಸ ಚೂಡಿದಾರ್ ಡ್ರೆಸ್ ಪೀಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿಯಾದ ಎಂಡಿಎಂಎ ಮೌಲ್ಯ ಸುಮಾರು 10 ಕೋಟಿ ರೂ ಆಗಿದೆ