ಬೆಂಗಳೂರು ಉತ್ತರ: ನಡು ರಸ್ತೆಯಲ್ಲಿ ಬರ್ತ್ಡೇ, ವಿದ್ಯಾರಣ್ಯಪುರ ಪೊಲೀಸರಿಂದ ಸ್ಥಳೀಯ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷನ ಬಂಧನ
ವಾಹನ ಸವಾರರಿಗೆ ಅಡಚಣೆಯುಂಟಾಗುವಂತೆ ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸಿ ಬರ್ತ್ ಡೇ ಸಂಭ್ರಮ ಆಚರಿಸಿದ್ದ ವ್ಯಕ್ತಿಯನ್ನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂನ್ 12ರಂದು ರಾತ್ರಿ ನರಸೀಪುರ ಮುಖ್ಯರಸ್ತೆಯಲ್ಲಿ ಸಂಭ್ರಮಾಚರಣೆ ನಡೆಸಿದ್ದ ಭಕ್ತವತ್ಸಲ ಎಂಬಾತನನ್ನ ಬಂಧಿಸಲಾಗಿದೆ ಎಂದು ಜೂನ್ 14ರಂದು ಬೆಳಿಗ್ಗೆ 11:30ಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ ಮಾಹಿತಿ ನೀಡಿದ್ದಾರೆ.