ಬೆಂಗಳೂರು ಉತ್ತರ: ನಗರದಲ್ಲಿ ಒಳಮೀಸಲಾತಿ ಸಭೆಯಲ್ಲಿ ಭಾಗಿಯಾದ ಸಚಿವ ಕೆ.ಹೆಚ್ ಮುನಿಯಪ್ಪ
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮಾದಿಗ ಸಂಬಂಧಿಸಿದ ಜಾತಿಗಳ ಒಳಮೀಸಲಾತಿ ಸಮೀಕ್ಷೆಯ ಜಾಗೃತಿ ಅಭಿಯಾನ ಸಭೆ ಆನಂದ್ ರಾವ್ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ನಡೆಯುತ್ತಿದ್ದು, ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ ಹೆಚ್ ಮುನಿಯಪ್ಪ ಅವರು, ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಕರೆದಿದ್ದಾರೆ ನಾನು ಬಂದಿದ್ದೇನೆ. ಕಾರ್ಯಕ್ರಮ ಒಳಮೀಸಲಾತಿ ಬಗ್ಗೆ ನಡೀತಿದೆ. ಒಳಮೀಸಲಾತಿ ಅದು ಸರಿಯಾಗಿ ನಡೀತ್ತಿಲ್ಲ. ಜನರು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ನಾಗಮೋಹನ್ ದಾಸ್ ಅವರು ಸರಿಯಾಗಿ ಮಾಡಿದ್ದಾರೆ. ಆದರೂ ಕೆಲವು ಅಂಶಗಳು ಸರಿಯಾಗಿ ಬಂದಿಲ್ಲ. ಹೀಗಾಗಿ ಸ್ವಾಮೀಜಿಗಳು ಇದರ ಬಗ್ಗೆ ಜನರಲ್ಲಿ ಒಂದು ಸಂದೇಶ ಹೋಗಬೇಕು ಎಂದಿದ್ದು,ಇದರ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು